ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಪ್ರತಿಪಕ್ಷಗಳು ಮಾಡಿರುವ ಆರೋಪಗಳ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಎಲ್ಲಾ ಪಕ್ಷಗಳನ್ನು ಕರೆದು ಇಂದು ಚರ್ಚೆ ನಡೆಸಿತು.
ನವದೆಹಲಿ (ಮೇ.12): ಇತ್ತೀಚಿಗೆ ನಡೆದ ಚುನಾವಣೆಗಳಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿತ್ತು ಎಂದು ಪ್ರತಿಪಕ್ಷಗಳು ಮಾಡಿರುವ ಆರೋಪಗಳ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಎಲ್ಲಾ ಪಕ್ಷಗಳನ್ನು ಕರೆದು ಇಂದು ಚರ್ಚೆ ನಡೆಸಿತು.
ಈ ಸಂದರ್ಭದಲ್ಲಿ ಮುಖ್ಯ ಚುನಾವಣಾಧಿಕಾರಿ ನಸೀಂ ಜೈದಿ, ಚುನಾವಣಾ ಆಯೋಗವು ಯಾರ ಪರವಾಗಿಯೂ ಇಲ್ಲ. ಎಲ್ಲಾ ಪಕ್ಷಗಳಿಂದ ನಾವು ಸಮಾನ ಅಂತರ ಕಾಪಾಡಿಕೊಂಡಿದ್ದೇವೆ. ವಿವಿಪ್ಯಾಟ್ ಗಳನ್ನು ಬಳಸಲು ಸರ್ಕಾರದಿಂದ ಅನುದಾನವನ್ನು ಪಡೆಯಲಾಗಿದೆ ಎಂದಿದ್ದಾರೆ.
7 ರಾಷ್ಟ್ರೀಯ ಪಕ್ಷಗಳು ಹಾಗೂ 35 ಪ್ರಾದೇಶಿಕ ಪಕ್ಷಗಳು ಇಂದು ಸಭೆಯಲ್ಲಿ ಪಾಲ್ಗೊಂಡಿದ್ದವು. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಆಪ್ ಪಕ್ಷದಿಂದ ಉಪಸ್ಥಿತರಿದ್ದು, ಹ್ಯಾಕಥಾನ್ ನಡೆಸಲು ಚುನಾವಣಾ ಆಯೋಗ ಸಮ್ಮತಿ ನೀಡಲಿಲ್ಲ ಎಂದು ಹೇಳಿದ್ದಾರೆ.
ಮುಂಬರುವ ಎಲ್ಲಾ ವಿಧಾನಸಭಾ ಹಾಗೂ ಲೋಕಸಭಾ ಚುನಾವನೆಯಲ್ಲಿ ಇನ್ಮುಂದೆ ವಿವಿಪ್ಯಾಟ್ ಬಳಸಲಾಗುವುದು ಎಂದು ನಸೀಂ ಜೈದಿ ಹೇಳಿದ್ದಾರೆ.
