ಇನ್ನೊಮ್ಮೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗವು ಉತ್ತರಪ್ರದೇಶದ ಬಿಜೆಪಿ ನಾಯಕನನ್ನು ಎಚ್ಚರಿಸಿದೆ.

ನವದೆಹಲಿ (ಜ.12): ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹೆಚ್ಚಳಕ್ಕೆ ಮುಸ್ಲಿಮರನ್ನು ಪರೋಕ್ಷವಾಗಿ ದೂಷಿಸಿದ ಬಿಜೆಪಿ ಸಂಸದ ಸಾಕ್ಷಿ ಮಹರಾಜ್’ಗೆ ಚುನಾವಣಾ ಅಯೋಗವು ಛೀಮಾರಿ ಹಾಕಿದೆ.

ಇನ್ನೊಮ್ಮೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗವು ಉತ್ತರಪ್ರದೇಶದ ಬಿಜೆಪಿ ನಾಯಕನನ್ನು ಎಚ್ಚರಿಸಿದೆ.

ತನ್ನ ವಿವಾದಾತ್ಮಕ ಹೇಳಿಕೆಗೆ ಸಾಕ್ಷಿ ಮಹರಾಜ್ ನೀಡಿರುವ ಸ್ಪಷ್ಟೀಕರಣವು ಒಪ್ಪುವಂತಹದಲ್ಲವೆಂದು ಚುನಾವಣಾ ಆಯೋಗ ಹೇಳಿದೆ.

ತಾನು ಹೇಳಿಕೆ ನೀಡಿರುವುದು ಸಾಧು-ಸಂತರ ಸಮಾವೇಶದಲ್ಲೇ ಹೊರತು ಸಾರ್ವಜನಿಕ ಸ್ಥಳದಲ್ಲಿ ಅಲ್ಲವೆಂದೂ, ಅದರಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುವುದಿಲ್ಲವೆಂದು ಸಾಕ್ಷಿ ಮಹರಾಜ್ ವಾದಿಸಿದ್ದರು.

ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಹಾಗೂ ಮಣಿಪುರ ರಾಜ್ಯಗಳಲ್ಲಿ ಫೆಬ್ರವರಿ ತಿಂಗಳಿನಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಜ.4ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ.