ಗೋವಾದಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಲಂಚ ತೆಗೆದುಕೊಳ್ಳುವಂತೆ ಮತದಾರರನ್ನು ಪ್ರೇರೆಪಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್  ನಡೆಯನ್ನು ಚುನಾವಣಾ ಆಯೋಗ ಖಂಡಿಸಿದೆ.

ನವದೆಹಲಿ (ಜ.21): ಗೋವಾದಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಲಂಚ ತೆಗೆದುಕೊಳ್ಳುವಂತೆ ಮತದಾರರನ್ನು ಪ್ರೇರೆಪಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ನಡೆಯನ್ನು ಚುನಾವಣಾ ಆಯೋಗ ಖಂಡಿಸಿದೆ.

ಚುನಾವಣಾ ಭಾಷಣದ ವೇಳೆ ಅರವಿಂದ್ ಕೇಜ್ರಿವಾಲ್, ಬಿಜೆಪಿ ಅಥವಾ ಕಾಂಗ್ರೆಸ್ ಅಭ್ಯರ್ಥಿಗಳು ಹಣದ ಆಮೀಷವೊಡ್ಡಿದರೆ ನಿರಾಕರಿಸಬೇಡಿ. ಹಣ ತೆಗೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ನಿಮ್ಮದೇ ಹಣ ಎಂಬಂತೆ ತೆಗೆದುಕೊಳ್ಳಿ. ಒಂದು ವೇಳೆ ಹಣ ಕೊಡದಿದ್ದರೆ ಅವರ ಕಚೇರಿಗಳಿಗೆ ಹೋಗಿ ಕೇಳಿ. ಆದರೆ ವೋಟಿನ ವಿಚಾರ ಬಂದಾಗ ಮಾತ್ರ ಆಪ್ ಅಭ್ಯರ್ಥಿ ಮುಂದಿರುವ ಬಟನ್ ಒತ್ತಿ ಎಂದು ಹೇಳಿದ್ದರು.

ಇವರ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಕೇಜ್ರಿವಾಲ್ ತಮ್ಮ ಮಾತಿಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ. ಚುನಾವಣಾ ಆಯೋಗ ಕೂಡಾ ಇದನ್ನು ನೀತಿ ಸಂಹಿತೆ ಉಲ್ಲಂಘನೆ ಎಂದು ಖಂಡಿಸಿದೆ.