ರೋಗಿಯ ಚೇತರಿಕೆಗಾಗಿ ಇಲ್ಲಿದೆ ನೋಡಿ ಕೆಲವು ಸಮತೋಲಿತ ಆಹಾರಗಳು.

ಇತ್ತೀಚಿನ ದಿನಗಳಲ್ಲಿ ಜನರು ಚಿಕನ್'ಗುನ್ಯ ದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಿಕನ್'ಗುನ್ಯ ದ ಜ್ವರದಿಂದ ಚೇತರಿಸಿಕೊಳ್ಳಲು ರೋಗಿಗೆ ಸಮತೋನಲ ಆಹಾರದ ಅವಶ್ಯಕತೆ ಇದೆ. ರೋಗಿಯ ಚೇತರಿಕೆಗಾಗಿ ಇಲ್ಲಿದೆ ನೋಡಿ ಕೆಲವು ಸಮತೋಲಿತ ಆಹಾರಗಳು.

ಹೆಚ್ಚು ದ್ರವ ಸೇವನೆ:

ರೋಗಿ ಸೇವಿಸುವ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರು, ತೆಂಗಿನ ನೀರು, ಅಥವಾ ನಿಂಬೆ ರಸವನ್ನು ಸೇರಿಸಿ. ರೋಗಿಗೆ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ.

ಸೊಪ್ಪು ಮತ್ತು ತರಕಾರಿಗಳು:

ಚಿಕನ್'ಗುನ್ಯ ಬಂದಾಗ ದೇಹದಲ್ಲಿ ಸಿ ಜೀವಸತ್ವದ ಕೊರತೆಯುಂಟಾಗುತ್ತದೆ. ಸಿ ಜೀವಸತ್ವವಿರುವ ಸೊಪ್ಪು ಮತ್ತು ತರಕಾರಿಗಳನ್ನು ನೀಡಿ. ಇದು ರೋಗಿ ಸುಲಭವಾಗಿ ಜೀರ್ಣಿಸಿಕೊಳ್ಳುವುದಕ್ಕೂ ಸಹಾಯವಾಗುತ್ತದೆ.

ಒಮೆಗಾ

ಒಮೆಗಾ ವನ್ನು ರೋಗಿಗೆ ನೀಡುವುದರಿಂದ ಮೂಳೆಗಳಲ್ಲಿ ಶಕ್ತಿ ತುಂಬುತ್ತದೆ. ಮತ್ತು ದೇಹದಲ್ಲಿನ ುರಿಯೂತವನ್ನು ಕಡಿಮೆ ಮಾಡುತ್ತದೆ.

ಸೇಬು ಮತ್ತು ವಿಟಮಿನ್ ಸಿ ಇರುವ ಆಹಾರಗಳು:

ಸೇಬು, ಬಾಳೆಹಣ್ಣು, ಕಿವಿ ಹಣ್ಣ, ಸ್ಟ್ರಾಬೆರಿ ಮುಂತಾದ ಹಣ್ಣುಗಳಲ್ಲಿ ರೋಗಿಯ ರೋಗನಿರೋಧಕ ಶಕ್ತಯ ಹೆಚ್ಚಳಕ್ಕೆ ಬೇಕಾದ ಅಂಸಗಳು ಇರುವುದರಿಂದ ಹಣ್ಣು ಮತ್ತು ಹಣ್ಣಿನ ರಸವನ್ನು ರೋಗಿಗೆ ನೀಡುತ್ತಿರಿ. ಮತ್ತಿ ವಿಟಮಿನ್ ಸಿ ಇರುವಂತಹ ಆಹಾರಗಳನ್ನು ನೀಡುತ್ತಿರಿ. ಇದರಿಂದ ಚಿಕನ್'ಗುನ್ಯ ದಿಂದ ಬಳಲುತ್ತಿರುವ ರೋಗಿ ಬಹು ಬೇಗ ಚೇತರಿಸಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.