ಡುನೆದಿನ್ ಮತ್ತು ವೆಲ್ಲಿಂಗ್ಟನ್`ನ ಉತ್ತರ-ದಕ್ಷಿಣ ಭಾಗದಲ್ಲಿ ಕಂಪನದ ವರದಿಯಾಗಿದೆ. 2011ರಲ್ಲಿ ಪೂರ್ವ ಕರಾವಳಿಯಲ್ಲಿ ಸಂಭವಿಸಿದ ಭೂಕಂಪನದಿಂದ 185 ಮಂದಿ ಸಾವಿಗೀಡಾಗಿದ್ದರು.

ಕ್ರೈಸ್ಟ್ ಚರ್ಚ್(ನ.13): ನ್ಯೂಜಿಲೆಂಡ್`ನ ಕ್ರೈಸ್ಟ್ ಚರ್ಚ್ ಸಮೀಪದ ಸಾಗರದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಕ್ರೈಸ್ಟ್ ಚರ್ಚ್`ನಿಂದ 57 ಮೈಲಿ ದೂರದ ಸಾಗರದಲ್ಲಿ ಕಂಪನ ಕೆಂದ್ರ ದಾಖಲಾಗಿದೆ. ಬೃಹದಾಕಾರದ ಅಲೆಗಳು ಏಳುತ್ತಿದ್ದು, ಕಡಲ ತಡಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಡುನೆದಿನ್ ಮತ್ತು ವೆಲ್ಲಿಂಗ್ಟನ್`ನ ಉತ್ತರ-ದಕ್ಷಿಣ ಭಾಗದಲ್ಲಿ ಕಂಪನದ ವರದಿಯಾಗಿದೆ. 2011ರಲ್ಲಿ ಪೂರ್ವ ಕರಾವಳಿಯಲ್ಲಿ ಸಂಭವಿಸಿದ ಭೂಕಂಪನದಿಂದ 185 ಮಂದಿ ಸಾವಿಗೀಡಾಗಿದ್ದರು.