24 ಗಂಟೆಯಲ್ಲಿ 2 ಬಾರಿ ಭೂಮಿ ನಡುಗಿದ್ದು ಇದರಿಂದ ಇಲ್ಲಿನ ಜನರು ತೀವ್ರ ಆತಂಕ ಎದುರಿಸುತ್ತಿದ್ದಾರೆ. ಹರ್ಯಾಣದ  ಹಜ್ಜಾರ್ ನಲ್ಲಿ ಭೂಮಿ ನಡುಗಿದ್ದು ಇದರಿಂದ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ.

ನವದೆಹಲಿ :  ಹರ್ಯಾಣದ ಹಜ್ಜಾರ್ ಜಿಲ್ಲೆಯಲ್ಲಿ ಮಧ್ಯಮ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಮುಂಜಾನೆ 6.28ರ ಸುಮಾರಿಗೆ ಇಲ್ಲಿ ಭೂ ಕಂಪನವಾಗಿದ್ದು ಭೂಮಿಯ 10 ಕಿ.ಮೀ ಆಳದಲ್ಲಿ ಭೂಮಿ ನಡುಗಿದೆ.

 ಕಳೆದ 24ಗಂಟೆಯಲ್ಲಿ 2ನೇ ಬಾರಿ ಇಲ್ಲಿ ಭೂ ಕಂಪನ ಸಂಭವಿಸಿದೆ ಎಂದು ಭೂ ಕಂಪನ ಮಾಪನ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.

3.7ರ ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಇದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಭೂಕಂಪನ ಮಾಪನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. 

ಸೋಮವಾರವೂ ಕೂಡ ಬೆಳಗ್ಗೆ 4.37ರ ಸುಮಾರಿಗೆ ಭೂ ಕಂಪನ ಸಂಭವಿಸಿತ್ತು. ಭೂಮಿಯ 10 ಕಿ.ಮೀ ಆಳದಲ್ಲಿ 3.8ರ ತೀವ್ರತೆಯಲ್ಲಿ ಭೂಮಿ ನಡುಗಿತ್ತು. 

ಕೆಲ ದಿನಗಳ ಹಿಂದಷ್ಟೇ ದಿಲ್ಲಿಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಸುರಿದು ಜನಜೀವನ ತತ್ತರಿಸಿತ್ತು. ಇದೀಗ ಪದೇ ಪದೇ ಸಂಭವಿಸುತ್ತಿರುವ ಭೂ ಕಂಪನದಿಂದ ಜನರಲ್ಲಿ ಆತಂಕ ಮೂಡಿದೆ. 

(ಸಾಂದರ್ಬಿಕ ಚಿತ್ರ)