ವಿಕೆ ಶಶಿಕಲಾ ಬಣದ ಲೋಕೋಪಯೋಗಿ ಸಚಿವರಾಗಿದ್ದ ಇ.ಪಳಿನಿ ಸ್ವಾಮಿ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಚೆನ್ನೈ(ಫೆ.16): ತಮಿಳುನಾಡು ರಾಜಕೀಯದಲ್ಲಿ ಈಗ ಹೊಸ ರಾಜಕೀಯ ಅಲೆ ಶುರುವಾಗಿದ್ದು, ಜಯಲಲಿತಾ ಹಾಗೂ ಕರುಣಾನಿಧಿ ನಂತರ ಹೊಸ ಮುಖ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದೆ. ವಿಕೆ ಶಶಿಕಲಾ ಬಣದ ಲೋಕೋಪಯೋಗಿ ಸಚಿವರಾಗಿದ್ದ ಇ.ಪಳಿನಿ ಸ್ವಾಮಿ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ತಮಿಳುನಾಡಿನ ಪಶ್ಚಿಮ ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಪ್ರಭಾವಿ ನಾಯಕರಾಗಿರುವ ಪಳಿನಿ ಸ್ವಾಮಿ ಕೊಂಗು ವೆಲ್ಲಾಲ ಗೌಂಡರ್​ ಸಮುದಾಯಕ್ಕೆ ಸೇರಿದ್ದು, ಸತತ 5 ಬಾರಿ ಶಾಸಕರಾಗಿ, ಸದ್ಯ ಲೋಕೋಪಯೋಗಿ ಸಚಿವರಾಗಿದ್ದರು. ಎಂಜಿಆರ್​ ಕಾಲದಿಂದಲೂ ಅಮ್ಮನಿಗೆ ನಿಷ್ಠೆಯಾಗಿದ್ದ ಇವರು ಜಯಾ ಸಂಪುಟದಲ್ಲಿ ನಂ.3 ಸಚಿವರಾಗಿದ್ದರು. 1981ರಿಂದಲೂ ಪಳನಿಸ್ವಾಮಿ ಎಐಎಡಿಎಂಕೆ ಪಕ್ಷದ ನಿಷ್ಠಾವಂತ ನಾಯಕರಾಗಿದ್ದಾರೆ. ಪಳಿನಿ ಸ್ವಾಮಿ ಜೊತೆಗೆ 31 ಮಂದಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಚಿವರ ಪಟ್ಟಿ

  1. .ಪಳನಿಸ್ವಾಮಿ - ಮುಖ್ಯಮಂತ್ರಿ
  2. .ಶ್ರೀನಿವಾಸನ್ - ಅರಣ್ಯ ಸಚಿವ
  3. .ಎ.ಸೆಂಗೊಟ್ಟಾಯಿಯನ್ - ಕ್ರೀಡೆ ಮತ್ತು ಯುವ ಕಲ್ಯಾಣ ಸಚಿವ
  4. .ರಾಜು - ಸಹಕಾರ ಸಚಿವ
  5. .ತಂಗಮನಿ - ಇಂಧನ, ಅಬಕಾರಿ
  6. .ಪಿ.ವೇಲುಮಣಿ - ಗ್ರಾಮೀಣ ಅಭಿವೃದ್ಧಿ ಸಚಿವ
  7. . ಜಯಕುಮಾರ್ - ಮೀನುಗಾರಿಕೆ ಸಚಿವ
  8. - ಕಾನೂನು ಸಚಿವ
  9. ​ಬಳಗನ್ - ಉನ್ನತ ಶಿಕ್ಷಣ ಸಚಿವ
  10. II ವಿ.ಸರೋಜಾ - ಸಮಾಜ ಕಲ್ಯಾಣ ಸಚಿವೆ
  11. .ಸಿ.ಸಂಪತ್ - ಕೈಗಾರಿಕಾ ಸಚಿವ
  12. .ಸಿ.ಕುರುಪ್ಪನನ್ - ಪರಿಸರ ಖಾತೆ ಸಚಿವ
  13. .ಕಾಮರಾಜ - ಆಹಾರ ಮತ್ತು ನಾಗರಿಕ ಖಾತೆ ಸಚಿವ
  14. .ಎಸ್..ಮನ್ನಿಯನ್ - ಜವಳಿ ಖಾತೆ ಸಚಿವ
  15. .ರಾಧಾಕೃಷ್ಣನ್ - ವಸತಿ ಖಾತೆ ಸಚಿವ
  16. II ಸಿ.ವಿಜಯಭಾಸ್ಕರ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
  17. .ದೊರೈಕಣ್ಣು - ಕೃಷಿ ಖಾತೆ ಸಚಿವ
  18. ರಾಜು - ಮಾಹಿತಿ ಮತ್ತು ಪ್ರಚಾರ ಖಾತೆ ಸಚಿವ
  19. .ಬಿ.ಉದಯ್​ಕುಮಾರ್ - ಕಂದಾಯ ಖಾತೆ ಸಚಿವ
  20. .ನಟರಾಜನ್ - ಪ್ರವಾಸೋದ್ಯಮ ಖಾತೆ ಸಚಿವ
  21. .ಸಿ.ವೀರಮಣಿ - ವಾಣಿಜ್ಯ ತೆರಿಗೆ ಖಾತೆ
  22. .ಟಿ.ರಾಜೇಂತ್ರ ಬಾಲಾಜಿ - ಹೈನುಗಾರಿಕೆ
  23. .ಬೆಂಜಾಮಿನ್ - ಗ್ರಾಮೀಣ ಕೈಗಾರಿಕೆ
  24. IIನಿಲೋಫರ್ ಕಫಿಲ್ - ಕಾರ್ಮಿಕ ಖಾತೆ
  25. .ಆರ್.ವಿಜಯಭಾಸ್ಕರ್ - ಸಾರಿಗೆ ಇಲಾಖೆ
  26. II ಎಂ.ಮನಿಕಂದನ್ - ಮಾಹಿತಿ ತಂತ್ರಜ್ಞಾನ
  27. .ಎಂ.ರಾಜಲಕ್ಷ್ಮಿ - ಆದಿ ದ್ರಾವಿಡ ಮತ್ತು ಬುಡಕಟ್ಟು ಅಭಿವೃದ್ಧಿ ಖಾತೆ
  28. .ಭಾಸ್ಕರನ್ - ಖಾದಿ ಮತ್ತು ಗ್ರಾಮೋದ್ಯೋಗ
  29. .ರಾಮಚಂದ್ರನ್ - ಹಿಂದು ಧಾರ್ಮಿಕ ದತ್ತಿ ಖಾತೆ
  30. .ವಲರ್​ಮತಿ - ಹಿಂದುಳಿದ ವರ್ಗಗಳ ಅಭಿವೃದ್ಧಿ ಖಾತೆ
  31. .ಬಾಲಕೃಷ್ಣ ರೆಡ್ಡಿ - ಪಶುಸಂಗೋಪನೆ