Asianet Suvarna News Asianet Suvarna News

ಈ ದೀಪಾವಳಿಗೆ ಇ – ಪಟಾಕಿ

ದೀಪಾವಳಿ ವೇಳೆ ಸಿಡಿಸುವ ಪಟಾಕಿಯಿಂದ ಶಬ್ದ, ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂಬ ಆರೋಪ ಸಾಮಾನ್ಯ. ಪರಿಸರದ ಬಗ್ಗೆ ಕಾಳಜಿ ಇದ್ದವರಿಗೂ, ಹಬ್ಬದ ದಿನ ಪಟಾಕಿ ಸಿಡಿಸದೇ ಇರುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಇಂಥ ಎಲ್ಲಾ ಸಮಸ್ಯೆಗಳಿಗೆ ಈ ಬಾರಿಯ ದೀಪಾವಳಿ ವೇಳೆ ಪರಿಹಾರ ಸಿಗುವ ಸಾಧ್ಯತೆ ಇದೆ.

E crackers For This Deepavali

ನವದೆಹಲಿ: ದೀಪಾವಳಿ ವೇಳೆ ಸಿಡಿಸುವ ಪಟಾಕಿಯಿಂದ ಶಬ್ದ, ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂಬ ಆರೋಪ ಸಾಮಾನ್ಯ. ಪರಿಸರದ ಬಗ್ಗೆ ಕಾಳಜಿ ಇದ್ದವರಿಗೂ, ಹಬ್ಬದ ದಿನ ಪಟಾಕಿ ಸಿಡಿಸದೇ ಇರುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಇಂಥ ಎಲ್ಲಾ ಸಮಸ್ಯೆಗಳಿಗೆ ಈ ಬಾರಿಯ ದೀಪಾವಳಿ ವೇಳೆ ಪರಿಹಾರ ಸಿಗುವ ಸಾಧ್ಯತೆ ಇದೆ.

ಹೌದು, ಸಾಮಾನ್ಯ ಪಟಾಕಿಗಳಂತೆ ಬಣ್ಣ, ಬೆರಗು, ಶಬ್ದ ಹೊರಡಿಸುವ ಆದರೆ ಪರಿಸರ ಮಾಲಿನ್ಯ ಉಂಟು ಮಾಡದ ಜೊತೆಗೆ ಜೇಬಿಗೂ ಹೊರೆ ತರದ ಇ-ಪಟಾಕಿಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಕೇಂದ್ರ ಸರ್ಕಾರಿ ಸ್ವಾಮ್ಯದ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ವಿದ್ಯುನ್ಮಾನ ಪಟಾಕಿ (ಇ-ಪಟಾಕಿ) ಸಂಶೋಧನೆಯಲ್ಲಿ ತೊಡಗಿದ್ದಾರೆ.

ಈಗಾಗಲೇ ಪಟಾಕಿಯ ಮಾದರಿ ಸಿದ್ಧವಾಗತೊಡಗಿದ್ದು, ಇನ್ನಾರು ತಿಂಗಳಲ್ಲಿ ಮಾದರಿ ಪಟಾಕಿ ಬಿಡುಗಡೆಯಾಗಲಿದ್ದು, ದೀಪಾವಳಿ ವೇಳೆಗೆ ಪಟಾಕಿ ಗ್ರಾಹಕರ ಕೈ ಸೇರುವ ವಿಶ್ವಾಸವಿದೆ. ಹೇಗಿರುತ್ತವೆ ಇ-ಪಟಾಕಿ?: ಇ ಪಟಾಕಿಗಳನ್ನು ದೀಪಾವಳಿ ವೇಳೆ ಬಳಸುವ ಶೃಂಗಾರದ ಬಲ್ಬ್‌ಗಳ ರೀತಿಯಲ್ಲಿ ತಯಾರಿಸಲಾಗಿರುತ್ತದೆ. ಈ ಪಟಾಕಿಗಳನ್ನು ಒಂದಕ್ಕೊಂದರಂತೆ ವೈರ್ ಮೂಲಕ ಜೋಡಿಸಲಾಗಿರುತ್ತದೆ.

ಈ ಪಟಾಕಿಗಳಲ್ಲಿ ಶಕ್ತಿಶಾಲಿ ಜನರೇಟರ್ ಮತ್ತು ಎಲ್ ಇಡಿ ಬಲ್ಬ್ ಅಳವಡಿಸಲಾಗಿರುತ್ತದೆ. ಈ ವೈರ್ ನ ಒಂದು ತುದಿಗೆ ಪಿನ್ ಇರುತ್ತದೆ. ಅದನ್ನು ಯಾವುದೇ ಎಲೆಕ್ಟ್ರಿಕ್ ಪಾಯಿಂಟ್‌ನಲ್ಲಿ ಹಾಕಿ, ಸ್ವಿಚ್ ಆನ್ ಮಾಡಿದರೆ ಆಯಿತು. ಪಟಾಕಿ ಜೋರಾಗಿ ಸದ್ದು ಮಾಡುತ್ತದೆ. ವಿವಿಧ ರೀತಿಯ ಬೆಳಕನ್ನು ಹಾಯಿಸುತ್ತದೆ. ಬೇಡವೆಂದರೆ ಎಲೆಕ್ಟ್ರಿಕ್ ಸ್ವಿಚ್ ಆಫ್ ಮಾಡಿದರೆ ಆಯಿತು. ಇದು ಮರುಬಳಕೆ ಮಾಡಬಹುದಾದ ಪಟಾಕಿ.

Follow Us:
Download App:
  • android
  • ios