ಮಡಿಕೇರಿ(ಸೆ.17): ಮಡಿಕೇರಿಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ಮಡಿಕೇರಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ.

ಬಿ ರಿಪೋರ್ಟ್​ನಲ್ಲಿ ಮಾಜಿ ಸಚಿವ ಕೆ.ಜೆ. ಜಾರ್ಜ್​ ಸೇರಿ ಮೂವರಿಗೆ ಸಿಐಡಿ ಕ್ಲೀನ್​ಚಿಟ್​ನೀಡಿದೆ. ಮಾಜಿ ಸಚಿವ ಜಾರ್ಜ್​, ಎಡಿಜಿಪಿ ಎ.ಎಂ​​. ಪ್ರಸಾದ್, ಡಿಐಜಿ ಪ್ರಣಬ್​ ಮೊಹಂತಿಗೆ ಸಿಐಡಿ ಕ್ಲೀನ್​ ಚಿಟ್​ನೀಡಿದೆ.

ಸೆಪ್ಟೆಂಬರ್​ 19ರ ಒಳಗಾಗಿ ಗಣಪತಿ ಪ್ರಕರಣದ ವರದಿ ಸಲ್ಲಿಸಲು ಸಿಐಡಿಗೆ ಕೋರ್ಟ್​ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಜಾರ್ಜ್​ ಸೇರಿ ಇತರೆ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷಿಯಿಲ್ಲ ಹಾಗೂ ಪ್ರಕರಣ ಸಂಬಂಧ ಸೂಕ್ತ ಸಾಕ್ಷ್ಯಾಧಾರ ಕೊರತೆ ಇದೆ ಎಂಬುವುದಾಗಿ ವರದಿಯಲ್ಲಿ ನಮೂದಿಸಲಾಗಿದೆ ಎಂದು ಸುವರ್ಣ ನ್ಯೂಸ್ ಗೆ ಸಿಐಡಿ ಮೂಲಗಳ ಮಾಹಿತಿ ನೀಡಿವೆ.