Asianet Suvarna News Asianet Suvarna News

ಸರ್ಕಾರಕ್ಕೆ ನುಗ್ಗಲಾರದ ತುತ್ತಾಗಿದೆ ಡಿವೈಎಸ್ಪಿ ಗಣಪತಿ ಕೇಸ್; ಪ್ರಕರಣಕ್ಕೆ ಸಿಕ್ಕಿದೆ ಬಿಗ್ ಟ್ವಿಸ್ಟ್

ಡಿವೈಎಸ್ಪಿ  ಎಂಕೆ ಗಣಪತಿ ನಿಗೂಢ ಆತ್ಮಹತ್ಯೆ ಪ್ರಕರಣ ಸಿದ್ದು ಸರ್ಕಾರಕ್ಕೆ ನುಗ್ಗಲಾರದ ತುತ್ತಾಗಿದೆ. ತನಿಖೆ ವೇಳೆ ಸಿಬಿಐ ಅಧಿಕಾರಿಗೆ ಸಿಕ್ಕ  ಬುಲೆಟ್​​ನ್ನ ವಿರೋಧ ಪಕ್ಷದವರು ಅಸ್ತ್ರವನ್ನಾಗಿ ಬಳಸಿಕೊಂಡು ಜಾರ್ಜ್​​​ ತಲೆದಂಡಕ್ಕೆ ಪಟ್ಟು ಹಿಡಿದಿದ್ದಾರೆ.ಇತ್ತ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾದ ಗಣಪತಿ ಸಹೋಧರಿ ಸಿಐಡಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

DySP Ganapati Case Become Complicated to Govt it gets big twist

ಬೆಂಗಳೂರು (ನ.15): ಡಿವೈಎಸ್ಪಿ  ಎಂಕೆ ಗಣಪತಿ ನಿಗೂಢ ಆತ್ಮಹತ್ಯೆ ಪ್ರಕರಣ ಸಿದ್ದರಾಮಯ್ಯ ಸರ್ಕಾರಕ್ಕೆ ನುಗ್ಗಲಾರದ ತುತ್ತಾಗಿದೆ. ತನಿಖೆ ವೇಳೆ ಸಿಬಿಐ ಅಧಿಕಾರಿಗೆ ಸಿಕ್ಕ  ಬುಲೆಟ​​ನ್ನ ವಿರೋಧ ಪಕ್ಷದವರು ಅಸ್ತ್ರವನ್ನಾಗಿ ಬಳಸಿಕೊಂಡು ಜಾರ್ಜ್​​​ ತಲೆದಂಡಕ್ಕೆ ಪಟ್ಟು ಹಿಡಿದಿದ್ದಾರೆ.ಇತ್ತ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾದ ಗಣಪತಿ ಸಹೋದರಿ ಸಿಐಡಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಸಿಬಿಐಗೆ ದೂರೆತ ಗುಂಡು ಸಿಐಡಿಗೆ ಯಾಕೆ ದೊರೆಯಲಿಲ್ಲ?

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆ ಕೈಗೊಂಡಿರೋ ಸಿಬಿಐ ತಂಡ ಕಳೆದ 10 ದಿನಗಳಿಂದ ಮಡಿಕೇರಿಯಲ್ಲಿ ಬೀಡುಬಿಟ್ಟು ತನಿಖೆ ತೀವ್ರಗೊಳಿಸಿದೆ . ತನಿಖೆ ವೇಳೆ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿನಾಯಕ ಲಾಡ್ಜ್​ನ ರೂಂ ನಂಬರ್​ 315 ರಲ್ಲಿ  ಸಿಕ್ಕ ಬುಲೇಟ್​​ ಹಲವು ಅನುಮಾನಗಳನ್ನ ಹುಟ್ಟಿಸಿದೆ. ಸಿಬಿಐ ಅಧಿಕಾರಿಗಳಿಗೆ ಪತ್ತೆಯಾದ ಗಂಡು ಈ ಮೊದಲು ತನಿಖೆ ಮಾಡಿ ಪ್ರಕರಣಕ್ಕೆ ಕ್ಲೀನ್​​​​ಚಿಟ್​​ ನೀಡಿದ್ದ ಸಿಐಡಿ ಅಧಿಕಾರಿಗಳಿಗೇಕೆ ಸಿಗಲಿಲ್ಲ ಅನ್ನೋದು ಗಣಪತಿ ಕುಡುಂಬಸ್ಥರು ಸೇರಿದಂತೆ ವಿರೋಧ ಪಕ್ಷದವರನ್ನ ಕೆರಳಿಸಿದೆ. ಪ್ರಕರಣ ಮುಚ್ಚಿ ಹಾಕಲು ಸಿಐಡಿ ಅಧಿಕಾರಿಗಳು ಹುನ್ನಾರ ನಡೆಸಿದರಾ ಅನ್ನೋ ಅನುಮಾನಗಳನ್ನ ಗಣಪತಿ ಕುಟುಂಬಸ್ಥರು ಮತ್ತು ವಿರೋಧಪಕ್ಷದವರು ವ್ಯಕ್ತಪಡಿಸುತ್ತಿದ್ದಾರೆ.

ಗಣಪತಿ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಸಚಿವ ಜಾರ್ಜ್​​ ಮೇಲೆ ಎಫ್​​ಐಆರ್​​ ದಾಖಲಾಗುತ್ತಿದ್ದಂತೆ ಇತ್ತ ಜಾರ್ಜ್​​ ರಾಜೀನಾಮೆ ನೀಡಬೇಕು ಎಂದು ಬೆಳಗಾವಿ ಅಧಿವೇಶನದಲ್ಲಿ ವಿರೋಧಪಕ್ಷದವರು ಬಿಗಿಪಟ್ಟು ಹಿಡಿದಿದ್ದಾರೆ . ಜಾರ್ಜ್​ಗೆ ಕ್ಲೀನ್​​ ಚಿಟ್​​ ನೀಡಬೇಕೆಂದೇ ರಾಜ್ಯ ಸರ್ಕಾರ ತನಿಖೆ ಯನ್ನ ಸಿಐಡಿಗೆ ವಹಿಸಿದ್ದು, ಆದ್ರೆ ಸಿಬಿಐ ತನಿಖೆ ವೇಳೆ ಅಧಿಕಾರಿಗಳಿಗೆ ಮಹತ್ವದ ದಾಖಲೆಗಳು ಪತ್ತೆಯಾಗಿರುವುದ್ರಿಂದ ಜಾರ್ಜ್​ ಜೈಲಿಗೆ ಹೋಗುದು ಗ್ಯಾರಂಟಿ . ಅದನ್ನ ತಪ್ಪಿಸ್ಸಲು ಯಾರಿದಂಲೂ ಸಾಧ್ಯವಿಲ್ಲ ಅಂತ ಬೆಳಗಾವಿ ಅಧಿವೇಶನದಲ್ಲಿ ​ ವಿಧಾನ ಪರಿಷತ್​​ ವಿಪಕ್ಷ ನಾಯಕ ಈಶ್ವರಪ್ಪ ಸರ್ಕಾರದ ವಿರುದ್ಧ ಹರಿಹಾಯ್ದರು.

ಒಟ್ಟಿನಲ್ಲಿ  ಗಣಪತಿ  ಆತ್ಮಹತ್ಯೆ  ಕೇಸ್ ಸಾಕಷ್ಟು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು,ಸಿಐಡಿ ಬಿ ರಿಪೋರ್ಟ್ ಹಾಕಿದರೆ ಸಿಬಿಐ ಅದನ್ನೆಲ್ಲಾ ಇಟ್ಟುಕೊಂಡು ಎಲ್ಲಾ ಆಯಾಮಗಳಲ್ಲೂ  ತನಿಖೆ ಚುರುಕುಗೊಳಿಸಿದೆ. ಗಣಪತಿ ಆತ್ಮಹತ್ಯೆ ಕೇಸ್'ನಲ್ಲಿ  ಆರೋಪಿ ಸ್ಥಾನದಲ್ಲಿರೋ ಸಚಿವ ಕೆ.ಜೆ.ಜಾರ್ಜ್,  ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೊಂಹತಿ,ಎ.ಎಂ ಪ್ರಸಾದ್ ಗೆ ಸಿಬಿಐ ತನಿಖೆ ಮತ್ತಷ್ಟು ಸಂಕಷ್ಟ ತಂದಿರೋದು ಮಾತ್ರ ಸತ್ಯ.

 

Follow Us:
Download App:
  • android
  • ios