ಡಿವೈಎಸ್’ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಮರುಜೀವ; ಜಾರ್ಜ್ ವಿರುದ್ಧ ಕ್ರಮ ಕೈಗೊಳ್ತಾರಾ ಸಿಎಂ?

DySP Ganapathi Suicide case reopen
Highlights

ಡಿವೈಎಸ್​ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಮರುಜೀವ ಬಂದಿದೆ. ಪ್ರಕರಣದ ಎಲ್ಲಾ ಆರೋಪಿಗಳ ಎದೆಯಲ್ಲಿ ಮತ್ತೆ ಢವಢವ ಶುರುವಾಗಿದೆ.  ನಾ.ಕೇಶವ್​ ನಾರಾಯಣ ವರದಿ ಅಧ್ಯಯನಕ್ಕಾಗಿ ಸಮಿತಿ ರಚನೆಗೆ ಸರ್ಕಾರ ನಿರ್ಧರಿಸಿದೆ.  ಸಮಿತಿ ರಚನೆ ಮಾಡಲು ಗೃಹ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಬೆಂಗಳೂರು (ಜೂ. 22): ಡಿವೈಎಸ್​ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಮರುಜೀವ ಬಂದಿದೆ. ಪ್ರಕರಣದ ಎಲ್ಲಾ ಆರೋಪಿಗಳ ಎದೆಯಲ್ಲಿ ಮತ್ತೆ ಢವಢವ ಶುರುವಾಗಿದೆ. 

ನಾ.ಕೇಶವ್​ ನಾರಾಯಣ ವರದಿ ಅಧ್ಯಯನಕ್ಕಾಗಿ ಸಮಿತಿ ರಚನೆಗೆ ಸರ್ಕಾರ ನಿರ್ಧರಿಸಿದೆ.  ಸಮಿತಿ ರಚನೆ ಮಾಡಲು ಗೃಹ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ. 

ನ್ಯಾ. ಕೇಶವ್​ ನಾರಯಣ್​ ಆಯೋಗ 2018 ರ ಫೆಬ್ರವರಿಯಲ್ಲಿ ಸರ್ಕಾರಕ್ಕೆ ವರದಿ ನೀಡಿತ್ತು.  ನಿವೃತ್ತ ಡಿಜಿಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆಗೆ ನಿರ್ಧಾರ ಮಾಡಲಾಗಿದೆ.  ಇದಕ್ಕೆ ಗೃಹ ಸಚಿವರ ಅನುಮೋದನೆಯಷ್ಟೇ ಬಾಕಿ ಇದೆ.  ನಿವೃತ್ತ ಡಿಜಿಪಿಗಳಾದ ಎಂ.ಕೆ.ಶ್ರೀವಾಸ್ತವ, ಎ.ಆರ್​.ಇನ್​ಪೇಂಟ್​,  ಎಸ್​.ಸಿ. ಸಕ್ಸೇನಾ ಅವರಲ್ಲಿ ಒಬ್ಬರನ್ನು ಸಮಿತಿ ಮುಖ್ಯಸ್ಥರಾಗಿ ನೇಮಕ ಮಾಡುವ  ಸಾಧ್ಯತೆ ಇದೆ. 

ಗೃಹ ಇಲಾಖೆ ನಿರ್ಧಾರದಿಂದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.   ಬೃಹತ್​ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್​​, ಐಜಿಪಿ ಪ್ರಣಬ್​ ಮೊಹಂತಿ,  ಡಿಜಿಪಿ ಎ.ಎಂ.ಪ್ರಸಾದ್​​ ಈ ಪ್ರಕರಣದ ಆರೋಪಿಗಳಾಗಿದ್ದಾರೆ .  ಕೆ.ಜೆ.ಚಾರ್ಜ್​ ವಿರುದ್ದ ಸಿಎಂ ಹೆಚ್​ಡಿಕೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.  
 

loader