ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ. ನ್ಯಾ.ಕೆ.ಎನ್.ಕೇಶವ ನಾರಾಯಣ ಆಯೋಗದ ಕಚೇರಿಗೆ ಬಂದಿರುವ ಸಿಬಿಐ ತಂಡ ಆಯೋಗ ಕಲೆ ಹಾಕಿರುವ ಮಾಹಿತಿ ಪಡೆದಿದೆ.
ಬೆಂಗಳೂರು (ನ.24): ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ. ನ್ಯಾ.ಕೆ.ಎನ್.ಕೇಶವ ನಾರಾಯಣ ಆಯೋಗದ ಕಚೇರಿಗೆ ಬಂದಿರುವ ಸಿಬಿಐ ತಂಡ ಆಯೋಗ ಕಲೆ ಹಾಕಿರುವ ಮಾಹಿತಿ ಪಡೆದಿದೆ.
ಚೆನ್ನೈ'ನಿಂದ ಆಗಮಿಸಿದ ಮೂವರು ಅಧಿಕಾರಿಗಳ ತಂಡ ಈಗಾಗಲೇ ವಿಚಾರಣೆ ಮುಕ್ತಾಯಗೊಳಿಸಿ ವರದಿ ಸಿದ್ದಗೊಳಿಸುತ್ತಿದೆ. ಆಯೋಗ 49 ಮಂದಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿದೆ.
ಸುಮಾರು 3 ಗಂಟೆಗಳಿಂದ ನ್ಯಾ.ಕೇಶವ ನಾರಾಯಣ ಅವರಿಂದ ಸಿಬಿಐ ತಂಡ ಮಾಹಿತಿ ಪಡೆದಿದೆ. ಕಳೆದ ವಾರವೇ ನೋಟಿಸ್ ನೀಡಿ ಮಾಹಿತಿ ನೀಡುವಂತೆ ಸಿಬಿಐ ಕೋರಿತ್ತು. ಆಯೋಗ ನೀಡಿರುವ ಮಾಹಿತಿ ಸಿಬಿಐ ತನಿಖೆ ಸಹಕಾರಿಯಾಗಲಿದೆ. ಆಯೋಗ ನೀಡಿದ ಮಾಹಿತಿ ಆಧರಿಸಿ ಮತ್ತೆ ತನಿಖಾಧಿಕಾರಿಗಳ ವಿಚಾರಣೆ ಒಳಪಡಿಸುವ ಸಾಧ್ಯತೆ ಇದೆ.
