ಬೆಂಗಳೂರು ಶಾಸಕನಿಗೆ ಸಂಪುಟ ಸೇರ್ಪಡೆಗೆ ಸಿದ್ಧವಾಗಲು ಸೂಚನೆ

First Published 14, Jun 2018, 9:55 PM IST
Dy CM G Parameshwara hints at cabinet expansion shortly
Highlights
  • ರಾಮಲಿಂಗಾ ರೆಡ್ಡಿ ಸಂಪುಟ ಸೇರಲು ಹೈಕಮಾಂಡ್ ಸೂಚನೆ
  • ಮುಂದಿನ ಭಾನುವಾರ ಅಥವಾ ಸೋಮವಾರ ಸಂಪುಟ ವಿಸ್ತರಣೆ

ಬೆಂಗಳೂರು[ಜೂ.14]: ಬೆಂಗಳೂರಿನ ಹಿರಿಯ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿಗೆ ಸಚಿವಸಂಪುಟ ಸೇರಲು ಸಿದ್ದರಾಗಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ.

ಭಾನುವಾರ ಅಥವಾ ಸೋಮವಾರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದ್ದು ಬಿಟಿಎಂ ಬಡಾವಣೆ ಶಾಸಕ ರಾಮಲಿಂಗಾ ರೆಡ್ಡಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸುವರ್ಣ ನ್ಯೂಸ್ .ಕಾಂ ಸೋದರ ಸಂಸ್ಥೆ ಸುವರ್ಣ ನ್ಯೂಸ್ ಗೆ ಕಾಂಗ್ರೆಸ್ ವರಿಷ್ಠರ ಉನ್ನತ ಮೂಲಗಳು ಮಾಹಿತಿ ನೀಡಿದೆ.

ಜಯನಗರ ಕ್ಷೇತ್ರದಲ್ಲಿ ಪುತ್ರಿಯನ್ನು ಗೆಲ್ಲಿಸಿ ಖುಷಿಯಲ್ಲಿರುವ ರೆಡ್ಡಿಯವರಿಗೆ ಹೈಕಮಾಂಡ್ ಸಹಿ ನೀಡಿದೆ. ಬೆಂಗಳೂರು ನಗರದಿಂದ ಕಾಂಗ್ರೆಸ್ ಪರವಾಗಿ ಈಗಾಗಲೇ ಜಮೀರ್ ಅಹಮದ್, ಕೆ,ಜೆ ಜಾರ್ಜ್ ಹಾಗೂ ಕೃಷ್ಣ ಬೈರೇಗೌಡ  ಸಚಿವರಾಗಿದ್ದಾರೆ. ಹಸ್ತ ಪಕ್ಷದಿಂದ ಬೆಂಗಳೂರು ನಗರದಲ್ಲಿ ಅತಿ ಹೆಚ್ಚಿನ ಸಂಖ್ಯೆಯ 16 ಮಂದಿ ಶಾಸಕರು ಆಯ್ಕೆಯಾಗಿದ್ದಾರೆ. ರಾಮಲಿಂಗಾ ರೆಡ್ಡಿ ಅವರ ಜೊತೆಗೆ ಇನ್ನು ಮೂವರು ಕಾಂಗ್ರೆಸ್ ಶಾಸಕರು ಮಂತ್ರಿಯಾಗಲಿದ್ದಾರೆ.

 

loader