ತಮ್ಮ ಬದಲು ಒಕ್ಕಲಿಗ ಜನಾಂಗದ ಇನ್ನೊಬ್ಬ ನಾಯಕ ಆರ್. ಅಶೋಕ್ ಅವರ ಮಾತಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ ಎಂಬ ಅಸಮಾಧಾನದಿಂದ ಡೀವಿ ಅವರು ವರಿಷ್ಠರಿಗೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಕುಶಾಲನಗರ(ಡಿ.12): ಪಕ್ಷದಲ್ಲಿ ಕಡೆಗಣನೆ ಬಗ್ಗೆ ನೇರ ಪ್ರತಿಕ್ರಿಯೆ ನೀಡಲು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನಿರಾಕರಿಸಿದ್ದಾರೆ.
‘ಬಿಜೆಪಿ ತತ್ವಬದ್ಧ ಸಿದ್ಧಾಂತ ಹೊಂದಿರುವ ಪಕ್ಷವಾಗಿದ್ದು, ಇಲ್ಲಿ ಪಕ್ಷದ ನಿಲುವಿಗೆ ಬೆಲೆಯೇ ಹೊರತು ವೈಯಕ್ತಿಕ ನಿಲುವಿಗಲ್ಲ’ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಡುವ ಉತ್ತರ ನೀಡಿದ್ದಾರೆ. ಪಕ್ಷದ ಪ್ರಮುಖ ನಿರ್ಧಾರಗಳಲ್ಲಿ ಒಕ್ಕಲಿಗ ಜನಾಂಗದ ಪ್ರಮುಖ ನಾಯಕನಾದ ತಮ್ಮನ್ನು ಕಡೆಗಣಿಸಲಾಗುತ್ತಿದೆ. ತಮ್ಮ ಬದಲು ಒಕ್ಕಲಿಗ ಜನಾಂಗದ ಇನ್ನೊಬ್ಬ ನಾಯಕ ಆರ್. ಅಶೋಕ್ ಅವರ ಮಾತಿಗೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ ಎಂಬ ಅಸಮಾಧಾನದಿಂದ ಡೀವಿ ಅವರು ವರಿಷ್ಠರಿಗೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕುಶಾಲನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನೇರ ಉತ್ತರ ನೀಡದ ಸಚಿವ, ಭಾರತೀಯ ಜನತಾ ಪಕ್ಷ ಜಾತಿ, ಧರ್ಮ ಆಧಾರಿತ ವ್ಯವಸ್ಥೆಗೆ ಸೀಮಿತವಲ್ಲ ಎಂದಷ್ಟೇ ಉತ್ತರಿಸಿದರು.
