ಬೆಂಗಳೂರು : ನಮ್ಮದು ಸಿಂಗಲ್ ಲಾರ್ಜೆಸ್ಟ್  ಪಾರ್ಟಿಯಾಗಿದ್ದರಿಂದ ಸರ್ಕಾರ ರಚನೆ ಮಾಡಲು ಮೊದಲ ಯತ್ನ ಮಾಡಿದೆವು. ಆದರೆ ಆಗಲಿಲ್ಲ ಎಂದಾಗ ಸುಮ್ಮನಾಗಿದ್ದೇವೆ ಎಂದು ಬಿಜೆಪಿ ನಾಯಕ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. 

ಆದರೆ ರಾಜ್ಯದಲ್ಲಿ ಸರ್ಕಾರ ಪತನವಾದರೆ ಖಂಡಿತವಾಗಿ ಸರ್ಕಾರ ರಚನೆಗೆ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ಶಾಸಕ  ಶಿವರಾಮ್ ಹೆಬ್ಬಾರ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರಾ ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಒಂದು ವೇಳೆ ಅವರು ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಸ್ವಯಂಪ್ರೇರಿತರಾಗಿ ಶಾಸಕರಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದ್ದು,  ಕಾಂಗ್ರೆಸ್ ದರಿದ್ರ ಪಕ್ಷ ಎಂದು ಗೊತ್ತಾಗಿ ಶಾಸಕರು ಹೊರ ಬರುತಿದ್ದಾರೆ.  ನಮ್ಮದು ಆಪರೇಷನ್ ಸ್ವಚ್ಚಭಾರತ್.  ನಾವು ಯಾರನ್ನು ಆಪರೇಷನ್ ಮಾಡುವುದಿಲ್ಲ ಎಂದು ಡಿವಿಎಸ್ ಹೇಳಿದ್ದಾರೆ. 

 ಇನ್ನು ಅವರೊಳಗಿನ ಆಂತರಿಕ ಕಚ್ಚಾಟದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಇದನ್ನು ಯಾರದ್ದೋ‌ ಮೇಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.