ನವದೆಹಲಿ (ನ.24): ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯ ಕಲಾಪದಲ್ಲಿ ಭಾಗವಹಿಸಿದ್ದರಿಂದ ಅವರ ವಿರುದ್ಧ ಟೀಕೆ, ಪ್ರಶ್ನೆಗಳ ಸುರಿಮಳೆ, ಗದ್ದಲ ಉಂಟಾಯಿತು. ಏತನ್ಮದ್ಯೆ ಸಮಾಜವಾದಿ ಪಕ್ಷದ ನರೇಶ್ ಅಗರ್'ವಾಲ್ ಕಟ್ ಮಾಡಿದ ಜೋಕಿಗೆ ಪ್ರಧಾನಿ ಸೇರಿದಂತೆ ಇಡೀ ಸದನವೇ ಒಮ್ಮೆ ನಗೆಗಡಲಲ್ಲಿ ಮುಳುಗಿತು.

ಪ್ರತಿಪಕ್ಷಗಳು ನೋಟು ನಿಷೇಧ ವಿಚಾರವಾಗಿ ಪ್ರಧಾನಿ ವಿರುದ್ಧ ಹರಿಹಾಯುತ್ತಿರುವಾಗ ಸಮಾಜವಾದಿ ಪಕ್ಷದ ನರೇಶ್ ಅಗರ್ ವಾಲ್, "ನೋಟು ನಿಷೇಧ ನಿರ್ಧಾರವನ್ನು ತೆಗೆದುಕೊಳ್ಳುವಾಗ ನೀವು ವಿತ್ತ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಕೆಲವರು ಹೇಳುತ್ತಾರೆ. ಒಂದು ವೇಳೆ ಜೇಟ್ಲಿಜಿಗೆ  ಈ ವಿಚಾರ ಮೊದಲೇ ಗೊತ್ತಿದ್ದರೆ ನಮ್ಮ ಬಳಿ ಪಿಸುಗುಡುತ್ತಿದ್ದರು" ಎಂದು ತಮಾಷೆ ಮಾಡಿದರು. ಆಗ ಮೋದಿ ಮತ್ತು ಜೇಟ್ಲಿ ಜೋರಾಗಿ ನಕ್ಕರು.

ಇಷ್ಟಕ್ಕೆ ಸುಮ್ಮನಾಗದ ಅಗರ್ ವಾಲ್, ಉತ್ತರ ಪ್ರದೇಶದಲ್ಲಿ ನಿಮ್ಮ ಪಕ್ಷದ ಸೆಫ್ಟಿ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.