ಆಧಾರ್ ದುರುಪಯೋಗದ ಬಗ್ಗೆ ಸಾರ್ವಜನಿಕರ ಕಳವಳದ ನಡುವೆಯೇ, ಇಂಥ ಸಮಸ್ಯೆಗಳ ನಿವಾರಣೆಗಾಗಿ ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಹೊಸ ಮಾರ್ಗೋಪಾಯದ ಬಗ್ಗೆ ಚಿಂತನೆ ನಡೆಸಿದೆ.

ಮುಂಬೈ: ಆಧಾರ್ ದುರುಪಯೋಗದ ಬಗ್ಗೆ ಸಾರ್ವಜನಿಕರ ಕಳವಳದ ನಡುವೆಯೇ, ಇಂಥ ಸಮಸ್ಯೆಗಳ ನಿವಾರಣೆಗಾಗಿ ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಹೊಸ ಮಾರ್ಗೋಪಾಯದ ಬಗ್ಗೆ ಚಿಂತನೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರನ್ವಯ ಪ್ರತಿಯೊಬ್ಬ ಆಧಾರ್ ಕಾರ್ಡ್‌ದಾರರಿಗೆ ಒಟಿಪಿ (ಒಂದು ಬಾರಿ ಬಳಸಬಹುದಾದ ಪಾಸ್‌ವರ್ಡ್ ) ಬೇರೊಂದು ಡಮ್ಮಿ ನಂಬರ್ ನೀಡಲಾಗವುದು. ಮೂಲ ಆಧಾರ್ ನಂಬರ್, ನಂಬರ್ ಪಡೆದ ವ್ಯಕ್ತಿ ಮತ್ತು ಅದನ್ನು ನೀಡಿದ ಆಧಾರ್ ಪ್ರಾಧಿಕಾರಕ್ಕೆ ಮಾತ್ರವೇ ತಿಳಿದಿರುತ್ತದೆ.

ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ಈ ಡಮ್ಮಿ ನಂಬರ್ ನೀಡಿದರೆ ಸಾಕು. ಅವು ಈ ನಂಬರ್ ಅನ್ನೇ ಬಳಸುತ್ತವೆ.