ದುಬೈನಲ್ಲಿ ಶನಿವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಶ್ರೀದೇವಿ ಮೃತ ದೇಹದ ಪರೀಕ್ಷೆಯ ಅಂತಿಮ ವಿಧಾನಗಳು ಪೂರ್ಣಗೊಂಡಿದ್ದು, ಕುಟುಂಬ ಸದಸ್ಯರಿಗೆ ನಿರಪೇಕ್ಷಣ ಪತ್ರವನ್ನು ಹಸ್ತಾಂತರ ಮಾಡಲಾಗಿದೆ.
ನವದೆಹಲಿ : ದುಬೈನಲ್ಲಿ ಶನಿವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಶ್ರೀದೇವಿ ಮೃತ ದೇಹದ ಪರೀಕ್ಷೆಯ ಅಂತಿಮ ವಿಧಾನಗಳು ಪೂರ್ಣಗೊಂಡಿದ್ದು, ಕುಟುಂಬ ಸದಸ್ಯರಿಗೆ ನಿರಪೇಕ್ಷಣ ಪತ್ರವನ್ನು ಹಸ್ತಾಂತರ ಮಾಡಲಾಗಿದೆ.
ಇನ್ನು ಕೆಲವೇ ಕೆಲವು ಪ್ರಕ್ರಿಯೆಗಳು ಬಾಕಿ ಇದೆ. ಮೃತದೇಹವು ಸಂರಕ್ಷಣಾ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಪ್ರಕ್ರಿಯೆಗಾಗಿ ಶವಗಾರದಿಂದ ಫಿಸಿಕಲ್ ಫಿಟ್ನೆಸ್ ಸೆಂಟರ್ ಮುಹಾಸ್ನಾಗೆ ರವಾನಿಸಲಾಗುತ್ತದೆ.
ಇದಕ್ಕೆ ಒಂದೆರಡು ಗಂಟೆಗಳ ಸಮಯಾವಕಾಶ ಹಿಡಿಯಲಿದ್ದು, ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ಇಂದೇ ಶ್ರೀ ದೇವಿ ಅವರ ಮೃತದೇಹ ಭಾರತಕ್ಕೆ ತರುವ ಸಾಧ್ಯತೆಗಳು ಬಹುತೇಕ ಖಚಿತವಾಗಿದೆ.
ಅಂಬಾನಿ ಅವರ ಖಾಸಗಿ ಜೆಟ್ ಭಾನುವಾರವೇ ದುಬೈಗೆ ತೆರಳಿದ್ದು, ಇದರ ಮೂಲಕವೇ ಮೃತದೇಹವನ್ನು ಭಾರತಕ್ಕೆ ತರಲಾಗುತ್ತದೆ. ಇಲ್ಲಿಗೆ ಮೃತದೇಹ ಆಗಮಿಸಿದ ಬಳಿಕ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಟ್ಟು ಬಳಿಕ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ.
