ದುಬೈ[ಏ.29]: ಅವರು ದುಬೈನಿಂದ ಹೊರದೇಶಗಳಿಗೆ ಹೋಗಿದ್ದೇ ಎರಡು ಬಾರಿ. ದುರಾದೃಷ್ಟವೆಂದರೆ ಎರಡೂ ಬಾರಿ ಅವರು ಹೋದ ಪ್ರದೇಶಗಳಲ್ಲಿ ಭಾರೀ ಅನಾಹುತವೇ ಸಂಭವಿಸಿತ್ತು. ಅದರೆ ಇವರ ಪಾಲಿಗೆ ಮಾತ್ರ ಅದೃಷ್ಟನೆಟ್ಟಗಿತ್ತು. ಹೀಗಾಗಿ 2 ಭಯೋತ್ಪಾದಕ ದಾಳಿಯನ್ನು ಇವರು ಗೆದ್ದುಬಂದರು.

ಇದು ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಅಭಿನವ್‌ ಮತ್ತು ನವರೂಪ್‌ ದಂಪತಿ ಕಥೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಾಹುತಿ ದಾಳಿ ವೇಳೆ ಅಭಿನವ್‌ ಮತ್ತು ನವರೂಪ್‌, ದಾಳಿಗೆ ತುತ್ತಾದ ಸಿನ್ನಮೋನ್‌ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಅಂದು ಈಸ್ಟರ್‌ ಪ್ರಾರ್ಥನೆ ಇದ್ದ ಕಾರಣ ಅಭಿನವ್‌ ಚಚ್‌ರ್‍ಗೆ ತೆರಳಿ, ಅಲ್ಲಿಂದ ಉಪಾಹಾರಕ್ಕೆಂದು ಸಿನ್ನಮೋನ್‌ ಹೋಟೆಲ್‌ಗೆ ಆಗಮಿಸ್ದಿ$್ದರು. ಅಷ್ಟರಲ್ಲಿ ಅಲ್ಲಿ ಸ್ಫೋಟ ಸಂಭವಿಸಿ ಹಲವರು ಸಾವನ್ನಪ್ಪಿದರು.

ಇನ್ನು 2008ರಲ್ಲಿ ಮುಂಬೈಗೆ ಅಭಿನವ್‌ ಆಗಮಿಸಿದ್ದ ವೇಳೆಯಲ್ಲೇ, ಪಾಕಿಸ್ತಾನದ ಮೂಲದ ಉಗ್ರರು ದಾಳಿ ನಡೆಸಿ 270ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದರು.