ಹೈದರಾಬಾದ್ ವಿವಿಯ ಪ್ರತಿಭಾವಂತ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ದೇಶಾದ್ಯಂತ ಹೋರಾಟದ ಕಿಚ್ಚು ಹಚ್ಚಿರುವ ಬೆನ್ನಿಗೇ, ಇದೀಗ ಹೊಸದಿಲ್ಲಿಯ ಜೆಎನ್‌ಯು ವಿವಿ ದಲಿತ ಸಂಶೋಧನಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ದೇಶವನ್ನು ದಿಗ್ಭ್ರಾಂತಗೊಳಿಸಿದೆ.
ನವದೆಹಲಿ(ಮಾ.14): ಹೈದರಾಬಾದ್ ವಿವಿಯ ಪ್ರತಿಭಾವಂತ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ದೇಶಾದ್ಯಂತ ಹೋರಾಟದ ಕಿಚ್ಚು ಹಚ್ಚಿರುವ ಬೆನ್ನಿಗೇ, ಇದೀಗ ಹೊಸದಿಲ್ಲಿಯ ಜೆಎನ್ಯು ವಿವಿ ದಲಿತ ಸಂಶೋಧನಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ದೇಶವನ್ನು ದಿಗ್ಭ್ರಾಂತಗೊಳಿಸಿದೆ.
ಮೃತ ವಿದ್ಯಾರ್ಥಿಯನ್ನು ಮುತ್ತು ಕೃಷ್ಣನ್ ಎಂದು ಗುರುತಿಸಲಾಗಿದೆ. ಸೀಟು ಹಂಚಿಕೆಯಲ್ಲಿ ದಲಿತ ವರ್ಗಕ್ಕೆ ಆಗುತ್ತಿರುವ ಅನ್ಯಾಯಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು, ಸಾಮಾಜಿಕ ತಾಣದಲ್ಲಿ ಆತ ಹಾಕಿರುವ ಕೊನೆಯ ಹೇಳಿಕೆಯಿಂದ ಬಹಿರಂಗವಾಗಿದೆ.
ರೋಹಿತ್ ವೇಮುಲಾ ಪರವಾಗಿ ಧ್ವನಿಯೆತ್ತಿದ ಜೆಎನ್ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಮತ್ತು ಅವರ ಗೆಳೆಯರನ್ನು ದೇಶದ್ರೋಹ ಆರೋಪದಲ್ಲಿ ಕೇಂದ್ರ ಸರಕಾರ ಜೈಲಿಗೆ ತಳ್ಳಿರುವುದು ದೇಶಾದ್ಯಂತ ಆಂದೋಲನಕ್ಕೆ ಕಾರಣವಾಗಿತ್ತು. ಈಗ ರಜನಿಕ್ರಿಶ್ ಎನ್ನುವ ದಲಿತ ಪ್ರತಿಭಾವಂತ ವಿದ್ಯಾರ್ಥಿ ಆತ್ಮಹತ್ಯೆ ಗೈದಿರುವುದು ದೇಶದ ಯುವ ಸಮೂಹವನ್ನು ಮತ್ತೆ ತತ್ತರಿಸುವಂತೆ ಮಾಡಿದೆ.
ದಲಿತ ವಿದ್ಯಾರ್ಥಿಯ ಈ ಆತ್ಮಹತ್ಯೆ ಪ್ರಕರಣಕ್ಕೆ ದೇಶದ ಮೂಲೆ ಮೂಲೆಗಳಿಂದ ತೀವ್ರ ವಿಷಾದ ಮತ್ತು ಖಂಡನೆ ವ್ಯಕ್ತವಾಗುತ್ತಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
