ಹಲಸೂರು ಗೇಟ್ ಸಂಚಾರಿ ಪೊಲೀಸರಿಗೊಂದು ಕಾಮಿಡಿ ನೈಟ್ ಕಾದಿತ್ತು. ಇನ್ಸ್ 'ಪೆಕ್ಟರ್ ಮುಹಮ್ಮದ್ ಅಲಿಯವರು ತಮ್ಮ ಸಿಬ್ಬಂದಿ ಸಹಿತ ಕಾರ್ಪೊರೇಶನ್ ಸರ್ಕಲ್ ಬಳಿ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಟೈಟ್ ಕುಡುಕರಿಬ್ಬರು ಇನ್ಸ್ ಪೆಕ್ಟರ್ ಅವರನ್ನೇ ತಳ್ಳಾಡಿ ಗಲಾಟೆ ಮಾಡಿರುವ ಘಟನೆ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ.

ಬೆಂಗಳೂರು(ಅ.07): ಹಲಸೂರು ಗೇಟ್ ಸಂಚಾರಿ ಪೊಲೀಸರಿಗೊಂದು ಕಾಮಿಡಿ ನೈಟ್ ಕಾದಿತ್ತು. ಇನ್ಸ್ 'ಪೆಕ್ಟರ್ ಮುಹಮ್ಮದ್ ಅಲಿಯವರು ತಮ್ಮ ಸಿಬ್ಬಂದಿ ಸಹಿತ ಕಾರ್ಪೊರೇಶನ್ ಸರ್ಕಲ್ ಬಳಿ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಟೈಟ್ ಕುಡುಕರಿಬ್ಬರು ಇನ್ಸ್ ಪೆಕ್ಟರ್ ಅವರನ್ನೇ ತಳ್ಳಾಡಿ ಗಲಾಟೆ ಮಾಡಿರುವ ಘಟನೆ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ.

ನಾಗರಭಾವಿ ನಿವಾಸಿಗಳಾದ ವಿಜಯ್ ಕುಮಾರ್ ಮತ್ತು ಲೋಕೇಶ್ ಎಂಬವರೇ ಕಾಮಿಡಿ ಕುಡುಕರು. ರಾತ್ರಿ ಎಂ.ಜಿ.ರೋಡ್ ನಿಂದ ಪಾರ್ಟಿ ಮುಗಿಸಿ ಗಡದ್ದಾಗಿ ಕುಡಿದು ಬಂದ ಇಬ್ಬರು ಡ್ರಿಂಕ್ ಆ್ಯಂಡ್ ಡ್ರೈವ್ ಪರಿಶೀಲಿಸುವ ಯಂತ್ರಕ್ಕೆ ಊದಿ ಎಂದರೆ ಊದದೇ ಜನಪ್ರತಿನಿಧಿಗಳನ್ನೇ ತಮ್ಮ ಬಾಯಿಯ ಅಂಚಿನಲ್ಲೇ ಕರೆದು ಗುಡ್ಡೆ ಹಾಕಿ ಬಿಟ್ಟಿದ್ದರು.

ಸುತ್ತ ನೆರೆದವರಿಗಿದೊಂದು ಮನೋರಂಜನೆಯಾಗಿ ಕಾಣುತ್ತಿತ್ತು. ನಂತರ ಕುಡುಕರ ಉಪಟಳ ಜಾಸ್ತಿಯಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಹಲಸೂರು ಗೇಟ್ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.