Asianet Suvarna News Asianet Suvarna News

ಬೀದರ್ ನಲ್ಲಿ ಕುಡುಕನ ‘ರಮ್’ಪಾಟ!

ಬೀದರ್ ನಲ್ಲಿ ಕುಡುಕನ ‘ರಮ್’ಪಾಟ

ರಸ್ತೆಯಲ್ಲಿ ಅರೆನಗ್ನವಾಗಿ ರಂಪಾಟ

ಕುಡುಕನಿಗೆ ಪೊಲೀಸರಿಂದ ಬೆಂಡು

ಅಮಲಿನಲ್ಲಿ ಅಸಭ್ಯ ವರ್ತನೆ ತೋರಿದ ಆರೋಪ

ಬೀದರ್(ಜು.15): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲಿ ರಂಪಾಟ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ನಡುರಸ್ತೆಯಲ್ಲೇ ತನ್ನ ಅಂಗಿ ಮತ್ತು ಪ್ಯಾಂಟ್ ಬಿಚ್ಚಾಕಿ ಕುಡಿದ ಮತ್ತಿನಲ್ಲಿ ಅಸಭ್ಯ ವರ್ತನೆ ತೋರಿದ ಭೂಪನಿಗೆ ಪೊಲೀಸರು ಸರಿಯಾದ ಪಾಠವನ್ನೇ ಕಲಿಸಿದ್ದಾರೆ.

ರಸ್ತೆಯಲ್ಲಿ ಅರೆ ಬೆತ್ತಲಾಗಿ ನಿಂತು ವಾಹನಗಳನ್ನು ತಡೆಯುತ್ತಿದ್ದ ಕುಡುಕ, ಬಟ್ಟೆ ಧರಿಸುವಂತೆ ಜನರು ಮನವಿ ಮಾಡಿಕೊಂಡರೂ ಕ್ಯಾರೆ ಎಂದಿಲ್ಲ. ಕೊನೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಕುಡುಕನಿಗೆ ಸರಿಯಗಿ ಬೆಂಡೆತ್ತಿ ಠಾಣೆಗೆ ಕರೆದೊಯ್ದಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಯೋ ನೋಡಿ..   
 

Video Top Stories