ರಾಂಗ್ ಸೈಡಿನಲ್ಲಿ ಬಂದ ಕಾರನ್ನು ತಡೆಯಲು ಹೋದ ಟ್ರಾಫಿಕ್ ಪೊಲೀಸ್ ಮೇಲೆ ಕಾರು ಹರಿದು 200 ಮೀಟರ್ವರೆಗೂ ಪೊಲೀಸ್ ಎಳೆದೊಯ್ದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಗುರುಗ್ರಾಮ : ಕುಡುಕ ವ್ಯಕ್ತಿಯೋರ್ವ ಟ್ರಾಫಿಕ್ ಪೊಲೀಸ್ ಮೇಲೆ ಕಾರನ್ನು ಹರಿಸಿ 200 ಮೀಟರ್ ವರೆಗೆ ಎಳೆದೊಯ್ದ ದುರ್ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಮಿಲ್ಲೇನಿಯಮ್ ಸಿಟಿ ಬಳಿಯಲ್ಲಿ ಘಟನೆ ನಡೆದಿದ್ದು, ರಾಂಗ್ ಸೈಡ್ ನಲ್ಲಿ ಗಾಡಿ ಚಲಾಯಿಸಿಕೊಂಡು ವ್ಯಕ್ತಿ ಬರುತ್ತಿದ್ದ ವೇಳೆ ಆತನನ್ನು ತಡೆಯಲು ಯತ್ನಿಸಿದ ಟ್ರಾಫಿಕ್ ಪೊಲೀಸ್ ಮೇಲೆ ಕಾರು ಹರಿದಿದೆ.
ಕುಡುಕ ಚಾಲಕನ ಕಾರಿಗೆ ಪೊಲೀಸ್ ಸಿಲುಕಿ 200 ಮೀಟರ್ ವರೆಗೆ ಎಳೆದೊಯ್ದಿದ್ದಾನೆ.
ಪ್ರಕರಣ ಸಂಬಂಧ ಕಾರು ಚಾಲಕನನ್ನು ಬಂಧಿಸಲಾಗಿದ್ದು, ಆತ ದಿಲ್ಲಿ ನಿವಾಸಿಯೆಂದು ತಿಳಿದು ಬಂದಿದೆ. ಸದ್ಯ ಗುರುಗ್ರಾಮ್ ಸೆಕ್ಟರ್ 29 ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
