Asianet Suvarna News Asianet Suvarna News

ಜೈಲಿಗೆ ಚಪ್ಪಲಿಯಲ್ಲಿ ಬರ್ತಿದೆ ಡ್ರಗ್ಸ್! ಹೇಗೆ ಬರ್ತಿದೆ ಗೊತ್ತಾ ?

ಉತ್ತರ- ಸಂಬಂಧಿಗಳಿಂದ ಹೊಸ ಚಪ್ಪಲಿ ಸಿಗುತ್ತದೆ ಮತ್ತು ಅದರಲ್ಲಿ ಡ್ರಗ್ಸ್ಇರುತ್ತದೆ! ಹೌದು, ಆಹಾರ ಪದಾರ್ಥಗಳು ಹಾಗೂ ಉಡುಪಿನ ಬಳಿಕ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮಾದಕ ವಸ್ತುಗಳನ್ನು ಪೂರೈಸಲು ಚಪ್ಪಲಿ ಬಳಸಿಕೊಳ್ಳುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. 

Drug supply to Bangalore jail
  • Facebook
  • Twitter
  • Whatsapp

ತಮ್ಮ ಕೇಸಿನ ವಿಚಾರಣೆಗೆ ಪರಪ್ಪನ ಅಗ್ರಹಾರ ಜೈಲಿಂದ ಪೊಲೀಸ್‌ ಭದ್ರತೆಯಲ್ಲಿ ಕೈದಿಗಳು ಕೋರ್ಟ್‌ಗೆ ತೆರಳುತ್ತಾರೆ. ಈ ವೇಳೆ ಹಳೆ ಚಪ್ಪಲಿ ಧರಿಸಿ ಹೋಗುವ ಅವರು, ಮರಳುವಾಗ ಹೊಸ ಚಪ್ಪಲಿ ಹಾಕಿಕೊಂಡು ಬರುತ್ತಾರೆ. ಕೋರ್ಟ್‌ ಆವರಣದಲ್ಲಿ ಕೈದಿಗಳ ಭೇಟಿಗೆ ಅವರ ಕುಟುಂಬದವರು ಹಾಗೂ ಸ್ನೇಹಿತರಿಗೆ ಅವಕಾಶವಿದೆ. ಈ ಸಮಯದಲ್ಲಿ ಚಪ್ಪಲಿ ವಿನಿಮಯವಾಗುತ್ತದೆ. ಹೊಸ ಚಪ್ಪಲಿ ಯಲ್ಲಿ ಡ್ರಗ್ಸ್‌ ತೆಗೆದುಕೊಂಡು ಬರುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ರಾಜಧಾನಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಕೋರ್ಟ್‌ಗೆ ಹೋಗುವಾಗ ಕೆಲ ಕೈದಿಗಳು ಹಳೆ ಚಪ್ಪಲಿ ಹಾಕಿಕೊಂಡು ಹೋಗಿ, ವಾಪಸ್‌ ಬರುವಾಗ ಹೊಸ ಚಪ್ಪಲಿ ಹಾಕಿಕೊಂಡು ಬರುತ್ತಾರೆ ಏಕೆ? ಇವರಿಗೆ ಹೊಸ ಚಪ್ಪಲಿ ಎಲ್ಲಿ ಸಿಗುತ್ತದೆ?
ಉತ್ತರ- ಸಂಬಂಧಿಗಳಿಂದ ಹೊಸ ಚಪ್ಪಲಿ ಸಿಗುತ್ತದೆ ಮತ್ತು ಅದರಲ್ಲಿ ಡ್ರಗ್ಸ್‌ ಇರುತ್ತದೆ! ಹೌದು, ಆಹಾರ ಪದಾರ್ಥಗಳು ಹಾಗೂ ಉಡುಪಿನ ಬಳಿಕ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮಾದಕ ವಸ್ತುಗಳನ್ನು ಪೂರೈಸಲು ಚಪ್ಪಲಿ ಬಳಸಿಕೊಳ್ಳುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. 
ವಿಚಾರಣಾಧೀನ ಹಾಗೂ ಸಜಾ ಕೈದಿಗಳು ತಮ್ಮ ವಿರುದ್ಧದ ಪ್ರಕರಣಗಳ ವಿಚಾರಣೆ ಸಲುವಾಗಿ ನ್ಯಾಯಾಲಯಕ್ಕೆ ತೆರಳಿದಾಗ ಚಪ್ಪಲಿ ಮೂಲಕ ಕಳ್ಳ ಹಾದಿಯಲ್ಲಿ ಜೈಲಿನೊಳಗೆ ಡ್ರಗ್ಸ್‌ ತರುತ್ತಿದ್ದು, ಅದಕ್ಕಾಗಿಯೇ ಹೊಸ ವಿನ್ಯಾಸದ ಚಪ್ಪಲಿಗಳನ್ನು ಕೈದಿಗಳ ಕಟುಂಬದವರು ಹಾಗೂ ಸ್ನೇಹಿತರು ಬಳಸುತ್ತಿದ್ದಾರೆ ಎಂದು ಕೇಂದ್ರ ಕಾರಾಗೃಹ ಅಧಿಕಾರಿಗಳು ಹೇಳಿದ್ದಾರೆ

Follow Us:
Download App:
  • android
  • ios