ಬೆಂಗಳೂರು[ಜು.16]  ಮಾದಕ ದ್ರವ್ಯ ನಿಯಂತ್ರಣ ಸಭೆಯಲ್ಲಿ ಡಿಸಿಎಂ ಪರಮೇಶ್ವರ್  ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಕ್ರಮ ‌ತೆಗೆದುಕೊಳ್ತಾರೆ ಅನ್ನೋ ಭಯ ಮಾರಾಟ ಮಾಡೋರಿಗೂ, ತೆಗೆದುಕೊಳ್ಳುವವರಿಗೂ ಇಲ್ಲ. ಭಯ ಇಲ್ಲದ್ದಕ್ಕೆ ಅರಾಮವಾಗಿ ಮಾರಾಟವಾಗುತ್ತಿದೆ.  ಇದರ ನಿಯಂತ್ರಣಕ್ಕೆ ಪೊಲೀಸ್ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

ಚಿಕ್ಕಬಳ್ಳಾಪುರ, ಹಾಸನ ಶಿವಮೊಗ್ಗ ಸೇರಿದಂತೆ ಹಲವು ಕಡೆ ಗಾಂಜಾ ಬೆಳೆಯುತ್ತಿದ್ದಾರೆ. ಮಾದಕ ದ್ರವ್ಯ ಕಡಿವಾಣಕ್ಕೆ ಯಾವೆಲ್ಲ ಕ್ರಮ ತೆಗೆದುಕೊಳ್ಳಬೇಕು ಅನ್ನೋ ಆಕ್ಷನ್ ಪ್ಲಾನ್ ಸಿದ್ಧ ಮಾಡಿ. ಒಂದು ವಾರದೊಳಗೆ ಡ್ರಗ್ಸ್ ದಂಧೆ ಕುರಿತು ವರದಿ ನೀಡಿ ಎಂದು ಸೂಚಿಸಿದರು.

ಕಳವಳ: ಮಾದಕ ವಸ್ತುಗಳ ಸ್ವರ್ಗವಾಗುತ್ತಿದೆಯೇ ನಮ್ಮ ಚೆಲುವ ಕನ್ನಡನಾಡು?

ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮ ಮಾಡಿ. ಎನ್ ಜಿಓ, ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆವತಿಯಿಂದ ಜಾಗೃತಿ ಕೆಲಸ ಮಾಡಿಸಿ. ಈ ಮಾದಕ ದ್ರವ್ಯ ಕೇಸ್ ಇಂದ ಹೆಚ್ಚು ಕೆಟ್ಟ ಹೆಸರು ಸರ್ಕಾರಕ್ಕೆ ಬರ್ತಿದೆ. ಪರಿಹಾರ ಕ್ರಮ ಯಾವುದನ್ನು ತೆಗೆದುಕೊಳ್ಳಬೇಕು ಎಂಬುದನ್ನು ವರದಿ ಮಾಡಿ. ಪರಿಹಾರ ಕ್ರಮದ ಬಗ್ಗೆ ಆಲೋಚಿಸುವುದನ್ನು ರೂಢಿಸಿಕೊಳ್ಳಿ ಎಂದು ಖಡಕ್ ಆಗಿ ಹೇಳಿದರು.