ವಾಹನ ಚಾಲನೆ ಮಾಡುತ್ತಿದ್ದಾಗಲೆ ಚಾಲಕನಿಗೆ ಹೃದಯಾಘಾತ : ಟೋಲ್'ಗೆಟ್'ಗೆ ಡಿಕ್ಕಿ, ಹಲವರಿಗೆ ಗಾಯ

news | Saturday, March 24th, 2018
Suvarna Web Desk
Highlights

ಅಪಘಾತದಿಂದ ಜಂಗಮರಕಲ್ಗುಡಿ ಗ್ರಾಮದ ಸುರೇಶ, ಯಮನೂರಪ್ಪ,ಯಮನೂರ ಎಂಬುವವರ ಸ್ಥಿತಿ ಗಂಭೀರವಾಗಿದ್ದು ಟಫಲ್'ಗೇಟ್ ಹಾಗೂ ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ

ಕೊಪ್ಪಳ(ಮಾ.24): ವಾಹನ ಚಾಲನೆ ಮಾಡುತ್ತಿದ್ದಾಗಲೆ ಬಸ್ ಚಾಲಕನಿಗೆ ಬಸ್ ಚಾಲಕನಿಗೆ ಹೃದಯಾಘಾತವಾಗಿ ಮರಳಿನ ಎತ್ತಿನ ಬಂಡಿ ಹಾಗೂ ಟೋಲ್'ಗೇಟ್'ಗೆ ಡಿಕ್ಕಿ ಹೊಡೆದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಬಳಿ ನಡೆದಿದೆ.

ಅಪಘಾತದಿಂದ ಜಂಗಮರಕಲ್ಗುಡಿ ಗ್ರಾಮದ ಸುರೇಶ, ಯಮನೂರಪ್ಪ,ಯಮನೂರ ಎಂಬುವವರ ಸ್ಥಿತಿ ಗಂಭೀರವಾಗಿದ್ದು ಟಫಲ್'ಗೇಟ್ ಹಾಗೂ ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಬಸ್ ಚಾಲಕ ಸೇರಿದಂತೆ ಗಾಯಾಳುಗಳನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಕನೂರುನಿಂದ ಮಂತ್ರಲಾಯಕ್ಕೆ ಬಸ್ ತೆರಳುತ್ತಿತ್ತು. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments 0
Add Comment