ಲೋಗಿ ಕ್ಯಾಶ್ ಏಜೆನ್ಸಿಗೆ ಸೇರಿದ ವಾಹನ ಇದಾಗಿದ್ದು, ಸ್ಥಳಕ್ಕೆ ಪೊಲಿಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಒಬ್ಬನನ್ನ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಬೆಂಗಳೂರು(ನ.23): ಎಟಿಎಂಗೆ ಹಣ ತುಂಬಲು ಬಂದಿದ್ದ ವಾಹನವನ್ನ ತೆಗೆದುಕೊಂಡು ಚಾಲಕ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೆ.ಜಿ. ರಸ್ತೆಯ ಅವೆನ್ಯೂ ರಸ್ತೆಯಲ್ಲಿ ನಡೆದಿದೆ. ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ಹಣ ತುಂಬಲು ಬಂದಿದ್ದ ವಾಹನ ಇದಾಗಿದ್ದು, 1.3 ಕೋಟಿ ರೂಪಾಯಿ ಹಣದೊಂದಿಗೆ ಚಾಲಕ ಪರಾರಿಯಾಗಿದ್ದಾನೆ.
ಲೋಗಿ ಕ್ಯಾಶ್ ಏಜೆನ್ಸಿಗೆ ಸೇರಿದ ವಾಹನ ಇದಾಗಿದ್ದು, ಸ್ಥಳಕ್ಕೆ ಪೊಲಿಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಒಬ್ಬನನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಬ್ಯಾಂಕ್ ಮ್ಯಾನೇಜರ್ ಮಾತ್ರ 4 ವಾಹನಗಳು ನಮ್ಮ ಕಾಂಪೌಂಡ್`ನಲ್ಲೇ ಇವೆ. ಯಾವುದೇ ಕಳ್ಳತನ ಆಗಿಲ್ಲ ಅಂತಿದ್ದಾರೆ.
