ಸ್ಯಾಂಡಲ್‌ವುಡ್ ನಟಿಯ ಮೇಲೆ ಆಟೋ ಚಾಲಕನೊಬ್ಬ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ಬೆಂಗಳೂರಿನ ಉತ್ತನಹಳ್ಳಿ ಬಳಿ ನಡೆದಿದೆ.

ಬೆಂಗಳೂರು, (ಸೆ.19): ಸ್ಯಾಂಡಲ್‌ವುಡ್ ನಟಿಯ ಮೇಲೆ ಆಟೋ ಚಾಲಕನೊಬ್ಬ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ಬೆಂಗಳೂರಿನ ಉತ್ತನಹಳ್ಳಿ ಬಳಿ ನಡೆದಿದೆ.

'ಬ್ಲಡ್‌ ಸ್ಟೋರಿ' ಚಿತ್ರದ ನಾಯಕಿ ಆಶ್ರಿನ್ ಮೆಹ್ತಾ ಅವರು ಹೆಚ್ಚುವರಿ ಹಣ ವಸೂಲಿ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಕೋಪಗೊಂಡ ಆಟೋ ಚಾಲಕ ಏಕಾಏಕಿ ನಟಿ ಆಶ್ರಿನ್ ಮೇಹ್ತಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ.

ಈ ಸಂಬಂಧ ನಟಿ ಆಶ್ರಿನ್​ ಮೆಹ್ತಾ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.