ಕುಡುಕರೇ ಹುಷಾರ್.. ಪಬ್ಲಿಕ್ ಪ್ಲೇಸ್‌ನಲ್ಲಿ ಕುಡಿದ್ರೆ ದಂಡ ಬೀಳುತ್ತೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 17, Jul 2018, 5:01 PM IST
Drinking in public in Goa will soon invite heavy fine
Highlights

ಕುಡುಕರಿಗೆ ಸ್ವರ್ಗ ಅಂತಿದ್ದರೆ ಅದು ಗೋವಾ ಎನ್ನುವ ಮಾತು ಇತ್ತು. ಅಲ್ಲಿಗೆ ಹೋಗಿ ಎಂಜಾಯ್ ಮಾಡಿ ಬಂದವರು ಇದು ಸತ್ಯ ಎಂಬ ಅನುಭವವನ್ನು ಪಡೆದುಕೊಂಡಿದ್ದರು. ಆದರೆ ಕುಡುಕರಿಗೆಲ್ಲ ಗೋವಾ ಸರಕಾರ ಇದೀಗ ದೊಡ್ಡ ಶಾಕ್ ನೀಡಲು ಮುಂದಾಗಿದೆ.

ಪಣಜಿ[ಜು.17] ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಮದ್ಯಪಾನ ಮಾಡುವವವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲು ಗೋವಾ ಸರಕಾರ ಮುಂದಾಗಿದೆ. ಅಬ್ಬಾ ಇದೇನಪ್ಪ ಸುದ್ದಿ ಅಂತೀರಾ..

ಹೌದು ..ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಆಗಸ್ಟ್ ತಿಂಗಳಿನಿಂದಲೇ ದಂಡ ಸೂತ್ರ ಜಾರಿಯಾಗಲಿದೆ. ಆಗಸ್ಟ್ 15 ರಿಂದ ಹದ್ದಿನ ಕಣ್ಣು ಇಡಲಾಗುತ್ತದೆ ಎಂದು ಪರಿಕ್ಕರ್ ಹೇಳಿದ್ದಾರೆ.ಕಂಡಕಂಡಲ್ಲಿ ಬೀಯರ್ ಬಾಟಲ್ ಎಸೆಯುವವರು ದಂಡ ಕಟ್ಟಬೇಕಾಗುತ್ತದೆ.

ಸ್ಥಳದಲ್ಲಿಯೇ 2500ಸಾವಿರ ರೂ. ಪೈನ್ ಕಟ್ಟಲು ಸೂಚಿಸಲಾಗುತ್ತದೆ. ಕಲ್ಲು ಬಂಡೆಗಳ ಮೇಲೆ ಬಾಟಲಿ ಒಡೆದು ಪರಿಸರ ಹದಗೆಡಿಸುವವರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

loader