ನಿನ್ನೆ ರಾತ್ರಿ ಕೆ. ಆರ್ .ಪುರಂನ ಸತ್ಯಸಾಯಿ ಅರ್ಥೋಪೆಡಿಕ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಗೆ ಸೇರಿದ ಌಂಬುಲೆನ್ಸನ್ನು ಚಾಲಕ ಕುಡಿದ ಮತ್ತಿನಲ್ಲಿ ಓಡಿಸುತ್ತಿದ್ದ. ಮಡಿಕೇರಿಯಿಂದ ಬೆಂಗಳೂರಿಗೆ ಬರುವ ವೇಳೆ ಬಿಡದಿ ಬಳಿ ಚಾಲಕ ಮಹೇಶ್ ಡ್ರಿಂಕ್ಸ್ ಮಾಡಿದ್ದಾನೆ. ಕುಡಿದು ಸೈರನ್ ಬಳಸಿಕೊಂಡು ಆಂಬುಲೆನ್ಸ್'ನಲ್ಲಿ ಬರುತ್ತಿದ್ದವನನ್ನು ಹಲಸೂರು ಗೇಟ್ ಪೊಲೀಸರು ತಪಾಸಣೆ'ಗೆ ಒಳಪಡಿಸಿದಾಗ ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರು(ಅ.28): ಕುಡಿದ ಮತ್ತಿನಲ್ಲಿ ಌಂಬುಲೆನ್ಸ್ ಚಾಲನೆ ಮಾಡುತ್ತಿದ್ದ ಌಮಬುಲೆನ್ಸ್ ಚಾಲಕನೊಬ್ಬ ಬೆಂಗಳೂರು ಪೊಲೀಸರಿಗೆ ತಗಲಾಕ್ಕೊಂಡಿದ್ದಾನೆ.
ನಿನ್ನೆ ರಾತ್ರಿ ಕೆ. ಆರ್ .ಪುರಂನ ಸತ್ಯಸಾಯಿ ಅರ್ಥೋಪೆಡಿಕ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಗೆ ಸೇರಿದ ಌಂಬುಲೆನ್ಸನ್ನು ಚಾಲಕ ಕುಡಿದ ಮತ್ತಿನಲ್ಲಿ ಓಡಿಸುತ್ತಿದ್ದ. ಮಡಿಕೇರಿಯಿಂದ ಬೆಂಗಳೂರಿಗೆ ಬರುವ ವೇಳೆ ಬಿಡದಿ ಬಳಿ ಚಾಲಕ ಮಹೇಶ್ ಡ್ರಿಂಕ್ಸ್ ಮಾಡಿದ್ದಾನೆ. ಕುಡಿದು ಸೈರನ್ ಬಳಸಿಕೊಂಡು ಆಂಬುಲೆನ್ಸ್'ನಲ್ಲಿ ಬರುತ್ತಿದ್ದವನನ್ನು ಹಲಸೂರು ಗೇಟ್ ಪೊಲೀಸರು ತಪಾಸಣೆ'ಗೆ ಒಳಪಡಿಸಿದಾಗ ಸಿಕ್ಕಿಬಿದ್ದಿದ್ದಾನೆ.
ಪೊಲೀಸರು ಚಾಲಕ ಮಹೇಶ್'ನನ್ನ ದಂಡ ಕಟ್ಟಿ ಮನೆಗೆ ಹೋಗುವಂತೆ ಹೇಳಿದ್ರು. ಆದ್ರೆ ಊಟಕ್ಕೆ ಹಣವಿಲ್ಲ ಎಂದು ಚಾಲಕ ಗೋಗರೆದಾಗ ಇನ್ಸ್'ಪೆಕ್ಟರ್ ಮಹಮ್ಮದ್ 100 ರೂಪಾಯಿ ಕೊಟ್ಟು ಊಟ ಕೊಡಿಸಿ, ಚಾಲಕ ಮಹೇಶ್ ಹಾಗೂ ಌಂಬುಲೆನ್ಸನ್ನು ವಶಕ್ಕೆ ಪಡೆದಿದ್ದಾರೆ.