500 ಕಿಮೀವರೆಗಿನ ಗುರಿಯನ್ನೂ ಯಶಸ್ವಿಯಾಗಿ ಹೊಡೆದುರಳಿಸಬಲ್ಲದುಡಿಆರ್ ಡಿಓ ಅಭಿವೃದ್ಧಿಪಡಿಸಿರುವ ಬ್ಯಾಲಿಸ್ಟಿಕ್ ಕ್ಷಿಪಣಿಮೊಬೈಲ್ ಲಾಂಚರ್ ಮೂಲಕ ಕೂಡ ಕ್ಷಿಪಣಿ ದಾಳಿ ನಡೆಸಬಹುದು
ಭುವನೇಶ್ವರ್ (ಡಿ. 22): ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಸ್ತಾನಿಗೆ ಮತ್ತೊಂದು ಕ್ಷಿಪಣಿ ಸೇರ್ಪಡೆಯಾಗುವುದು ನಿಶ್ಚಿತವಾಗಿದೆ. ಸರ್ಫೇಸ್-ಟು-ಸರ್ಫೇಸ್ ಗೈಡೆಡ್, ಅಲ್ಪ ಶ್ರೇಣಿಯ "ಪ್ರಳಯ್" ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು (Pralay Surface to Surface Ballistic Missile) ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಓ) (Defence Research and Development Organisation ) ಬುಧವಾರ ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ಈ ಕ್ಷಿಪಣಿಯು ತನ್ನ ಎಲ್ಲಾ ಉದ್ದೇಶಗಳನ್ನು ಪೂರೈಕೆ ಮಾಡಿದೆ ಎಂದು ಡಿಆರ್ ಡಿಓ (DRDO) ಪ್ರಕಟಣೆಯಲ್ಲಿ ತಿಳಿಸಿದೆ. 150 ರಿಂದ 500 ಕಿಲೋಮೀಟರ್ ವ್ಯಾಪ್ತಿಯ ಗುರಿಗಳನ್ನು ಈ ಕ್ಷಿಪಣಿ ಯಶಸ್ವಿಯಾಗಿ ಹೊಡೆದುರಳಿಸಬಲ್ಲುದು. ಒಡಿಶಾದ ಕರಾವಳಿ ತೀರದಲ್ಲಿರುವ ಎಪಿಜಿ ಅಬ್ದುಲ್ ಕಲಾಂ ದ್ವೀಪದಲ್ಲಿ ಇದರ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು.
ಇದು ಅತ್ಯಾಧುನಿಕ ಮಿಸೈಲ್ ಆಗಿದ್ದು, ಪ್ರತಿಬಂಧಕ ಅಂದರೆ ಇಂಟರ್ ಸೆಪ್ಟರ್ ಮಿಸೈಲ್ ಗಳನ್ನು (Interceptor Missiles) ಹೊಡೆದುರುಳಿಸಲು ಸಾಧ್ಯವಾಗುವ ರೀತಿಯಲ್ಲಿ ಈ ಸುಧಾರಿತ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ವಾಯು ಮಾರ್ಗದಲ್ಲಿ ನಿರ್ದಿಷ್ಟ ವ್ಯಾಪ್ತಿಯ ಪ್ರಯಾಣವನ್ನು ಮುಗಿಸಿದ ಬಳಿಕ, ತನ್ನ ಪಥವನ್ನು ಸ್ವತಃ ಸಾಮರ್ಥ್ಯವನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಇದು ಗರಿಷ್ಠ ಮಟ್ಟದ ನಿಖರತೆಯೊಂದಿಗೆ ಸೂಚಿಸಲಾದ ಗುರಿಯನ್ನು ತಲುಪಲು ಯಶಸ್ವಿಯಾಗಿದೆ. ಅದರೊಂದಿಗೆ ಇದರ ನಿಯಂತ್ರಣ, ಮಾರ್ಗಪಥ ಹಾಗೂ ಮಿಷನ್ ಆಲ್ಗಾರಿದಮ್ ಗಳನ್ನೂ ಇದು ಮೌಲ್ಯೀಕರಿಸಿದೆ ಎಂದು ಡಿಆರ್ ಡಿಓ ಪ್ರಕಟಣೆಯಲ್ಲಿ ಹೇಳಿದೆ.
ಪರೀಕ್ಷಾರ್ಥ ಪ್ರಯೋಗದ ಸಮಯದಲ್ಲಿ ಕ್ಷಿಪಣಿಯ ಎಲ್ಲಾ ಉಪವ್ಯವಸ್ಥೆಗಳು ತೃಪ್ತಿಕರವಾಗಿ ಕಾರ್ಯನಿರ್ವಹಿಸಿದೆ. ಇದರ ಎಲ್ಲಾ ಪ್ರಯೋಗಳನ್ನು ಸೆರೆ ಹಿಡಿಯಲಾಗಿದ. ಪ್ರಳಯ್ ಘನ ಪ್ರೊಪಲ್ಲೆಂಟ್ ರಾಕೆಟ್ ಮೋಟಾರ್ (Solid Propellant Rocket Motor)ಮೂಲಕ ಇದು ಚಾಲಿತವಾಗಿದ್ದು, ಹೊಸ ಹೊಸ ತಂತ್ರಜ್ಞಾನಗಳನ್ನು ಇದು ಹೊಂದಿದೆ ಎಂದು ತಿಳಿಸಿದೆ.
ಅತ್ಯಾಧುನಿಕವಾದ ಸರ್ಫೇಸ್ ಟು ಸರ್ಫೇಸ್ ಮಿಸೈಲ್ ಗಳನ್ನು ಅತ್ಯಂತ ವೇಗವಾಗಿ ಅಭಿವೃದ್ಧಿ ಮಾಡಿದ ಹಾಗೂ ಯಶಸ್ವಿಯಾಗಿ ಉಡಾವಣೆ ಮಾಡಿದ ಡಿಆರ್ ಡಿಓ ವಿಜ್ಞಾನಿಗಳಿಗೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ (Defence Minister Rajnath Singh) ಅಭಿನಂದನೆ ಸಲ್ಲಿಸಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಸಾಧಿಸಿದ ಪ್ರಮುಖ ಮೈಲಿಗಲ್ಲು ಎಂದು ರಾಜನಾಥ್ ಸಿಂಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಡಿಆರ್ ಡಿಓ ಚೇರ್ಮನ್ ಡಾ. ಜಿ ಸತೀಶ್ ರೆಡ್ಡಿ (Chairman DRDO, Dr G Satheesh Reddy), ಪ್ರಳಯ್ ಮಿಸೈಲ್ ಟೀಮ್ ನ ಭಾಗವಾಗಿದ್ದವರಿಗೆ ಅಭಿನಂದನೆ ಸಲ್ಲಿಸಿದರು. ಈ ಕ್ಷಿಪಣಿಯು ಆಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದು, ಹೊಸ ತಲೆಮಾರಿನ ಸರ್ಫೇಸ್ ಟು ಸರ್ಫೇಸ್ ಮಿಸೈಲ್ ಕ್ಷಿಪಣಿಯಾಗಿದೆ. ಈ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಸೇನೆಗೆ ಸೇರಿಸುವ ಮೂಲಕ ಭಾರತದ ಸಶಸ್ತ್ರ ಪಡೆಗಳಿಗೆ ಇನ್ನಷ್ಟು ಬಲ ತುಂಬಿದಂತಾಗಲಿದೆ ಎಂದು ಹೇಳಿದ್ದಾರೆ.
Pinaka-ER: ಹೊಸ ರಾಕೆಟ್ ಲಾಂಚರ್ ಪಿನಾಕಾ ಯಶಸ್ವಿ ಪರೀಕ್ಷೆ, ಭಾರತಕ್ಕೆ ಮತ್ತೊಂದು ಗರಿ
ಮೊಬೈಲ್ ಲಾಂಚರ್ ಮೂಲಕ ಉಡಾಯಿಸಬಹುದಾದ ಪ್ರಳಯ್, ಗೈಡೆಡ್ ವ್ಯವಸ್ಥೆಗಳನ್ನು ಹೊಂದಿದ್ದು, ಸಂಪೂರ್ಣ ನಮ್ಮದೇ ಆದ ನ್ಯಾವಿಗೇಶನ್ ವ್ಯವಸ್ಥೆಗಳು ಹಾಗೂ ಇಂಟಿಗ್ರೇಟೆಡ್ ಅವಿಯೋನಿಕ್ಸ್ ಕೂಡ ಇದು ಹೊಂದಿದೆ ಎಂದು ತಿಳಿಸಿದ್ದಾರೆ. 2015ರ ಮಾರ್ಚ್ ತಿಂಗಳಿನಲ್ಲಿ ಈ ಮಿಸೈಲ್ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬಜೆಟ್ ನಲ್ಲಿ 333 ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಭಾರತಯ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ ಪ್ರೋಗ್ರಾಮ್ ನ (Indian ballistic missile programme)ಪೃಥ್ವಿ ಡಿಫೆನ್ಸ್ ವೆಹಿಕಲ್ ಅನ್ನು (Prithvi Defence Vehicle)ಆಧರಿಸಿ ಈ ಶಸ್ತ್ರಾಸ್ತ್ರವನ್ನು ರಚನೆ ಮಾಡಲಾಗಿದೆ.
