ಚಾಕು ಇರಿತದಿಂದ ಪತ್ನಿ ಸತ್ಯಾ ಹಾಗೂ ಪಕ್ಕದ ಮನೆಯ ನಿವಾಸಿ ಅರುಣ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು(ಮಾ.03): ಅತ್ತೆ ಮಾವನನ್ನೆ ಅಳಿಯ ಕೊಲೆ ಮಾಡಿರುವ ಘಟನೆ ನಗರದ ಕೋಣನಕುಂಟೆ ಬಳಿಯ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ನಡೆದಿದೆ.

ಮಾವ ಕುಮಾರ್ ಹಾಗೂ ಅತ್ತೆ ಮುರಗಮ್ಮ ಮೃತರು. ಸೆಂಥಿಲ್ ಕುಮಾರ್ ಇಬ್ಬರನ್ನು ಕೊಂದ ಕಿರಾತಕ. ಚಾಕು ಇರಿತದಿಂದ ಪತ್ನಿ ಸತ್ಯಾ ಹಾಗೂ ಪಕ್ಕದ ಮನೆಯ ನಿವಾಸಿ ಅರುಣ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಾಗಿದೆ.