ದಂಪತಿಯ ಬರ್ಬರ ಹತ್ಯೆ
ಬೆಂಗಳೂರು(ನ.28): ಸಿಲಿಕಾನ್ ಸಿಟಿಯಲ್ಲಿ ಮತ್ತೆ ನೆತ್ತರು ಹರಿದಿದೆ. ದಂಪತಿಗಳನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಾರತ್ಹಳ್ಳಿ ಬ್ರಿಡ್ಜ್ ಬಳಿಯ ಅಶ್ವಥ್ ನಗರದಲ್ಲಿ ನಡೆದಿದೆ. ಬಿಇಎಲ್ ಮಾಜಿ ನೌಕರ ಗೋವಿಂದನ್, ಅವರ ಪತ್ನಿ ಕೊಲೆಯಾಗಿರುವವರು. ಸ್ಥಳಕ್ಕೆ ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹ್ಮದ್ ಭೇಟಿ ನೀಡಿದ್ದು, ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
