ವಿಮಾನ ಪ್ರಯಾಣಿಕರಿಗೆ ಶೀಘ್ರದಲ್ಲೇ ವೈಫೈ ಸೌಲಭ್ಯ ಲಭ್ಯವಾಗಲಿದ್ದು ವಿಮಾನಯಾನ ಸುಖದ ಜೊತೆ ಇಷ್ಟಪಟ್ಟವರ ಜೊತೆ ವಿಡಿಯೋ ಕಾಲಿಂಗ್ ಮಾಡಬಹುದು.

ನವದೆಹಲಿ (ನ.22): ವಿಮಾನ ಪ್ರಯಾಣಿಕರಿಗೆ ಶೀಘ್ರದಲ್ಲೇ ವೈಫೈ ಸೌಲಭ್ಯ ಲಭ್ಯವಾಗಲಿದ್ದು ವಿಮಾನಯಾನ ಸುಖದ ಜೊತೆ ಇಷ್ಟಪಟ್ಟವರ ಜೊತೆ ವಿಡಿಯೋ ಕಾಲಿಂಗ್ ಮಾಡಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದುವರೆಗೂ ಭಾರತೀಯ ವಿಮಾನಯಾನದಲ್ಲಿ ಫೋನ್ ಕಾಲ್ ಗಳು, ವೈಫೈ ಸೇವೆಗೆ ಅವಕಾಶವಿರಲಿಲ್ಲ. ಈಗ ವೈಫೈ ಸೌಲಭ್ಯ ಒದಗಿಸಲು ದೂರಸಂಪರ್ಕ ಇಲಾಖೆಯು ಪ್ರಸ್ಥಾವನೆಯನ್ನು ಸಲ್ಲಿಸಿದೆ.

"ವಿಮಾನದಲ್ಲಿ ವೈಫೈ ಸೌಲಭ್ಯ ಒದಗಿಸಲು ದೂರ ಸಂಪರ್ಕ ಇಲಾಖೆ ಈಗಾಗಲೇ ಪ್ರಸ್ಥಾವನೆಯನ್ನು ಸಲ್ಲಿಸಿದೆ. ಭಾರತೀಯ ಟೆಲಿಗ್ರಾಫಿಕ್ ಕಾಯ್ದೆ ತಿದ್ದುಪಡಿಯೂ ಸಹ ಪ್ರಸ್ತಾವನೆಯಲ್ಲಿ ಒಳಗೊಂಡಿದೆ" ಎಂದು ನಾಗರೀಕ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿಂಹ ಹೇಳಿದ್ದಾರೆ.