ಛತ್ತೀಸ್‌ಗಢ್ ದಲ್ಲಿ ಮತ್ತೆ ಅಟ್ಟಹಾಸ ಮೆರೆದ ನಕ್ಸಲರು! ನಕ್ಸಲರ ಗುಂಡಿನ ದಾಳಿಗೆ ದೂರದರ್ಶನ ಕ್ಯಾಮರಾಮ್ಯಾನ್ ಸಾವು! ನಕ್ಸಲೀಯರ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳೂ ಹುತಾತ್ಮ! ದೂರದರ್ಶನದ ಕ್ಯಾಮೆರಾಮ್ಯಾನ್ ಅಚ್ಯುತಾನಂದ್ ಹತ! ಚುನಾವಣಾ ವರದಿ ಮಾಡಲು ದೆಹಲಿಯಿಂದ ಬಂದಿದ್ದ ಅಚ್ಯುತಾನಂದ್

ದಂತೇವಾಡ(ಅ.30): ಛತ್ತೀಸ್‌ಗಢ್ ದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದು, ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿ, ದೂರದರ್ಶನದ ಕ್ಯಾಮೆರಾಮ್ಯಾನ್ ಒಬ್ಬರು ಮೃತಪಟ್ಟಿರುವ ಘಟನೆ ಅರಣ್ ಪುರದ ನೀಲವಾ ಪ್ರದೇಶದಲ್ಲಿ ನಡೆದಿದೆ. 

ಅರುಣ್‌ಪುರದಲ್ಲಿ ನಕ್ಸಲರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಎನ್'ಕೌಂಟರ್ ನಲ್ಲಿ ಇಬ್ಬರು ಪೊಲೀಸರು ಹಾಗೂ ದೂರದರ್ಶನದ ಕ್ಯಾಮೆರಾಮ್ಯಾನ್ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

Scroll to load tweet…

ಮೃತಪಟ್ಟವರನ್ನು ಸಬ್ ಇನ್ಸಪೆಕ್ಟರ್ ರುದ್ರ ಪ್ರತಾಪ್, ಸಹಾಯಕ ಪೇತದೆ ಮಂಗಲು ಮತ್ತು ದೂರದರ್ಶನದ ಕ್ಯಾಮೆರಾಮ್ಯಾನ್ ಅಚ್ಯುತಾನಂದ್ ಎಂದು ಗುರುತಿಸಲಾಗಿದೆ. 

Scroll to load tweet…

ಎಂದಿನಂತೆ ಇಂದು ಬೆಳಗ್ಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಭದ್ರತಾ ಪಡೆಗಳೊಂದಿಗೆ ದೂರದರ್ಶನ ಕ್ಯಾಮೆರಾಮ್ಯಾನ್ ಕೂಡ ತೆರಳಿದ್ದರು. ನಕ್ಸಲರಿದ್ದ ಸ್ಥಳದತ್ತ ತೆರಳುತ್ತಿದ್ದಂತೆಯೇ ನಕ್ಸಲರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.

Scroll to load tweet…

ಚುನಾವಣಾ ವರದಿ ಮಾಡುವ ಸಲುವಾಗಿ ದೂರದರ್ಶನದ ಮೂವರು ಸದಸ್ಯರ ತಂಡ ದೆಹಲಿಯಿಂದ ಛತ್ತೀಸ್‌ಗಢ್‌ಗೆ ಬಂದಿತ್ತು ಎಂದು ದಂತೇವಾಡ ಪೊಲೀಸ್ ಅಧಿಕಾರಿ ಅಭಿಷೇಕ್ ಪಲ್ಲವ್ ಅವರು ಹೇಳಿದ್ದಾರೆ. ಮೃತಪಟ್ಟ ಕ್ಯಾಮೆರಾಮ್ಯಾನ್ ಅಚ್ಯುತಾನಂದ ಸಾಹೂ ಒಡಿಶಾದ ಬದ್ಗದ್ ಜಿಲ್ಲೆಯ ನಿವಾಸಿಯಾಗಿದ್ದರು.

Scroll to load tweet…

Scroll to load tweet…