ದೆಹಲಿ ಮೆಟ್ರೋದರ ಹೆಚ್ಚಳವನ್ನು ಕಡಿಮೆ ಮಾಡುವುದಾದರೆ ಮುಂದಿನ 5 ವರ್ಷಗಳ ಕಾಲ ಸರ್ಕಾರ ವಾರ್ಷಿಕ 3 ಸಾವಿರ ಕೋಟಿ ಹಣವನ್ನು ಪಾವತಿಸಬೇಕಾಗುತ್ತದೆ. ಆಮ್ ಆದ್ಮಿ ಮುಂದೆ ದೊಡ್ಡ ಸವಾಲಿದೆ ಎಂದು ಕೇಂದ್ರ ಗೃಹ ಹಾಗೂ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ನವದೆಹಲಿ (ಅ.07): ದೆಹಲಿ ಮೆಟ್ರೋದರ ಹೆಚ್ಚಳವನ್ನು ಕಡಿಮೆ ಮಾಡುವುದಾದರೆ ಮುಂದಿನ 5 ವರ್ಷಗಳ ಕಾಲ ಸರ್ಕಾರ ವಾರ್ಷಿಕ 3 ಸಾವಿರ ಕೋಟಿ ಹಣವನ್ನು ಪಾವತಿಸಬೇಕಾಗುತ್ತದೆ. ಆಮ್ ಆದ್ಮಿ ಮುಂದೆ ದೊಡ್ಡ ಸವಾಲಿದೆ ಎಂದು ಕೇಂದ್ರ ಗೃಹ ಹಾಗೂ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿನಿತ್ಯ ದೆಹಲಿ ಮೆಟ್ರೋದಲ್ಲಿ 27 ಲಕ್ಷ ಮಂದಿ ಪ್ರಯಾಣಿಸುತ್ತಾರೆ. ಕಳೆದ 8 ವರ್ಷಗಳಲ್ಲಿ 2 ನೇ ಬಾರಿಗೆ ಮೆಟ್ರೋ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಅರವಿಂದ್ ಕೇಜ್ರಿವಾಲರ ಈ ನಿರ್ಧಾರ ಜನ ವಿರೋಧಿಯಾದದ್ದು ಎಂದು ಹರ್ದೀಪ್ ಸಿಂಗ್ ಹೇಳಿದ್ದಾರೆ.

ಒಂದು ವೇಳೆ ಸರ್ಕಾರ ಮೆಟ್ರೋ ದರವನ್ನು ಹೆಚ್ಚಿಸಿದರೆ ಅದನ್ನು ತಡೆಯುವ ಅಧಿಕಾರ ನಮಗಿಲ್ಲ. ಆದರೆ ನಾವು ಇದನ್ನು ಪರಿಗಣಿಸಿ ಸರ್ಕಾರವನ್ನು ಪ್ರಶ್ನಿಸುತ್ತೇವೆ ಎಂದಿದ್ದಾರೆ.

ಈ ವರ್ಷ ದೆಹಲಿ ಮೆಟ್ರೋದಲ್ಲಿ ಈಗಾಗಲೇ ಕನಿಷ್ಠ ದರ 8 ರಿಂದ 10 ಕ್ಕೇರಿಸಲಾಗಿದೆ. ಗರಿಷ್ಠ ದರ 30 ರಿಂದ 50 ಕ್ಕೇರಿಸಲಾಗಿದೆ. ಈಗ ಮತ್ತೊಮ್ಮೆ ಹೆಚ್ಚು ಮಾಡಿದರೆ ಪ್ರಿ 2 ಕಿಲೋಮೀಟರ್’ಗೆ 5-10 ರೂ ಹೆಚ್ಚು ನೀಡಬೇಕಾಗುತ್ತದೆ.