ಇನ್ನು ಮುಂದೆ ಪಾದ ಮುಟ್ಟಿ ನಮಸ್ಕಾರ ಮಾಡಬೇಡಿ: ನಾಯಕರಿಗೆ ಮಾಯಾ ಸೂಚನೆ

First Published 20, Feb 2018, 8:23 AM IST
Dont touch my Feet when you Greet me Mayawati to Party Workers
Highlights

ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ತಮ್ಮನ್ನು ಆಹ್ವಾನಿಸುವ ವೇಳೆ ಪಾದವನ್ನು ಮುಟ್ಟಿನಮಸ್ಕರಿಸುವ ಪದ್ಧತಿಯನ್ನು ಬಿಡುವಂತೆ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಸೂಚನೆ ನೀಡಿದ್ದಾರೆ.

ನವದೆಹಲಿ: ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ತಮ್ಮನ್ನು ಆಹ್ವಾನಿಸುವ ವೇಳೆ ಪಾದವನ್ನು ಮುಟ್ಟಿನಮಸ್ಕರಿಸುವ ಪದ್ಧತಿಯನ್ನು ಬಿಡುವಂತೆ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಸೂಚನೆ ನೀಡಿದ್ದಾರೆ.

‘ಪಕ್ಷದ ಕಾರ್ಯಕರ್ತರು ನೀಡುವ ಗೌರವಕ್ಕೆ ಮಾಯವತಿಯವರಿಗೆ ಸಂತೋಷವಿದೆ. ಆದರೆ ಇದು ಸರಿಯಲ್ಲ. ಕಾರ್ಯಕರ್ತರು ಈ ಕ್ರಮವನ್ನು ನಿಲ್ಲಿಸಬೇಕೆಂದು ಆದೇಶ ಹೊರಡಿಸಿದ್ದಾರೆ’ ಎಂದು ಬಿಎಸ್‌ಪಿ ರಾಜ್ಯಸಬಾ ಸದಸ್ಯ ಮುನ್ಕದ್‌ ಆಲಿ ಹೇಳಿದ್ದಾರೆ.

ಬಿಎಸ್‌ಪಿ ಯು ದಲಿತ ನಾಯಕ ಅಂಬೇಡ್ಕರ್‌ ಅವರ ಚಿಂತನೆಗಳಿಂದ ಪ್ರಭಾವಿತವಾದ ಪಕ್ಷವಾಗಿದ್ದು, ಅಸಮಾನತೆಯನ್ನು ವಿರೋಧಿಸುತ್ತದೆ. ಹಾಗಾಗಿ ಪಕ್ಷದ ನಾಯಕರನ್ನು ಆಹ್ವಾನಿಸುವಾಗ ‘ಜೈಭೀಮ್‌’ ಎಂಬ ಘೋಷವಾಕ್ಯ ಬಳಸುವುದು ಸೂಕ್ತ ಎಂದು ಕಾರ್ಯಕರ್ತರು ಕೂಡ ಹೇಳಿದ್ದಾರೆ.

loader