ಸನ್ನಿಯನ್ನು ದೇವತೆ ಮಾಡದಿರಿ; ನಿರ್ದೇಶಕರಿಗೆ ಬಿಜೆಪಿ ಮುಖಂಡ ಎಚ್ಚರಿಕೆ

First Published 6, Dec 2017, 4:16 PM IST
Dont Show Sunny leon as Hindu Goddess
Highlights

ನಟಿ ಸನ್ನಿ ಲಿಯೋನ್​​ಳನ್ನು ಸಿನಿಮಾಗಳಲ್ಲಿ ಹಿಂದೂ ದೇವತೆಯ ಪಾತ್ರದಲ್ಲಿ ತೋರಿಸದಂತೆ ಹರಿಯಾಣದ ಬಿಜೆಪಿ ಮುಖಂಡ ಸುರಲ್ ಅಮು ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ (ಡಿ.06): ನಟಿ ಸನ್ನಿ ಲಿಯೋನ್​​ಳನ್ನು ಸಿನಿಮಾಗಳಲ್ಲಿ ಹಿಂದೂ ದೇವತೆಯ ಪಾತ್ರದಲ್ಲಿ ತೋರಿಸದಂತೆ ಹರಿಯಾಣದ ಬಿಜೆಪಿ ಮುಖಂಡ ಸುರಲ್ ಅಮು ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸನ್ನಿ ಲಿಯೋನ್​​ ನೆಲೆಸಿದ್ದು ವಿದೇಶದಲ್ಲಿ. ಆಕೆಯನ್ನು ಸಿನಿಮಾಗಳಲ್ಲಿ ಹಿಂದೂ ದೇವತೆಯಾಗಿ ಬಿಂಬಿಸುವುದನ್ನು ನಾವು ಸಹಿಸುವುದು ಸಾಧ್ಯವೇ?  ಒಂದು ವೇಳೆ ಸನ್ನಿಯನ್ನು ದೇವತೆಯನ್ನಾಗಿ ತೋರಿಸಿದರೆ  ನಾವು ಸುಮ್ಮನಿರಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ. ಪದ್ಮಾವತಿ ಚಿತ್ರದ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ತಲೆ ಕಡಿದವರಿಗೆ 10 ಕೋಟಿ ಬಹುಮಾನ ನೀಡುವುದಾಗಿ ಇತ್ತೀಚೆಗೆ ಸುರಲ್​​ ಘೋಷಿಸಿದ್ದರು. ಈವರೆಗೆ ಮಾದಕ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ನಟಿ ಸನ್ನಿ ಲಿಯೋನ್‌ ಹೊಸ ಐತಿಹಾಸಿಕ ತಮಿಳು ಚಿತ್ರವೊಂದರಲ್ಲಿ ವೀರ ರಾಣಿಯಾಗಿ ಮಿಂಚಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ವಿಸಿ ವಾದಿವುದಯನ್‌ ನಿರ್ದೇಶನ ಮಾಡುತ್ತಿದ್ದಾರೆ.  ಇದೀಗ ಹರಿಯಾಣ ಬಿಜೆಪಿ ಮುಖಂಡ ಸನ್ನಿ ಲಿಯೋನ್​ಳನ್ನು ಟಾರ್ಗೆಟ್​ ಮಾಡಿದ್ದಾರೆ.

 

loader