ಬೆಂಗಳೂರು(ಜು.20):  ಒಂದಲ್ಲ, ಎರಡಲ್ಲ ಬರೋಬ್ಬರಿ 45 ಬಗೆಯ ತಿಂಡಿ ತಿನಿಸುಗಳ ಆಹಾರೋತ್ಸವ ಕಾರ್ಯಕ್ರಮಕ್ಕೆ ಬೆಂಗಳೂರು ಸಜ್ಜಾಗಿದೆ. ಬಿಎಸ್‌ಎಂ ಜೈನ್ ಅಸೋಸಿಯೇಶನ್ ಬೆಂಗಳೂರು ಹಾಗೂ ಜೈನ್ ಸಹಕಾರದ ಸಹಯೋಗದೊಂದಿಗೆ ಜುಲೈ 21(ಭಾನುವಾರ) ಆಹಾರೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಶೇಷ ಆಹಾರೋತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜೈನರ ಸುಮಾರು 45 ಬಗೆಯ ವಿವಿದ ತಿಂಡಿ ತಿನಿಸುಗಳು ಮೇಳೈಸಲಿದೆ. ಸಂಜೆ 5 ಗಂಟೆಗೆ ನಗರದ ಎಂ.ಜಿ ರಸ್ತೆಯ ಹೊಟೆಲ್ ಅಜಂತಾದಲ್ಲಿ ಆಹಾರೋತ್ಸವ 2019 ಕಾರ್ಯಕ್ರಮ ನಡೆಯಲಿದೆ. 

ದಕ್ಷಿಣ ಕನ್ನಡದ ಪತ್ರೊಡ್ಡೆ, ಬಸಳೆ ಪುಂಡಿ, ಕೊಟ್ಟೆ ಕಡುಬು, ನೀರ್ ದೊಸೆ, ಗೋಳಿ ಬಜೆ, ಮಂಗಳೂರು ಬನ್ಸ್, ಮಿನಿ ಇಡ್ಲಿ ಸಾಂಬಾರ್, ನೀರುಳ್ಳಿ ಬಜೆ ಸೇರಿದಂತೆ ಹಲವು ವಿಶೇಷ ತಿನಿಸುಗಳು ಆಹಾರ ಪ್ರೀಯರನ್ನು ಕೈಬೀಸಿ ಕರೆಯಲಿದೆ.