ಸಿಂಧಗಿ ಆರ್ ಡಿ ಪಾಟೀಲ್ ಪಿಯು ಕಾಲೇಜಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಡೊನೆಶನ್ ಹಾವಳಿ

Donation deal in Sindhagi R D Patil PU College
Highlights

ಸಿಂದಗಿಯ ಶಿಕ್ಷಣ ಸಂಸ್ಥೆಯೊಂದು ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿದೆ. ಇಲ್ಲಿನ ಆರ್.ಡಿ.ಪಾಟೀಲ್ ಪಿಯು ಕಾಲೇಜಿನಲ್ಲಿ ಡೊನೇಷನ್ ವಸೂಲಿ ಎಗ್ಗಿಲ್ಲದೇ ನಡೆಯುತ್ತಿದೆ.  ಡೊನೇಷನ್ ವಸೂಲಿ ಕುರಿತು ವಿದ್ಯಾರ್ಥಿಗಳು ರೆಕಾರ್ಡ್ ಮಾಡಿರುವ ವಿಡಿಯೋ ಬಹಿರಂಗಗೊಂಡಿದೆ. 

ವಿಜಯಪುರ (ಜೂ. 14):  ಸಿಂಧಗಿಯ ಶಿಕ್ಷಣ ಸಂಸ್ಥೆಯೊಂದು ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿದೆ. ಇಲ್ಲಿನ ಆರ್.ಡಿ.ಪಾಟೀಲ್ ಪಿಯು ಕಾಲೇಜಿನಲ್ಲಿ ಡೊನೇಷನ್ ವಸೂಲಿ ಎಗ್ಗಿಲ್ಲದೇ ನಡೆಯುತ್ತಿದೆ. 

ಡೊನೇಷನ್ ವಸೂಲಿ ಕುರಿತು ವಿದ್ಯಾರ್ಥಿಗಳು ರೆಕಾರ್ಡ್ ಮಾಡಿರುವ ವಿಡಿಯೋ ಬಹಿರಂಗಗೊಂಡಿದೆ.  ಕಳೆದ ಕೆಲ ದಿನಗಳ ಹಿಂದೆ ಡಿಡಿಪಿಯು ಸಿಂಧಗಿಯ ಹೆಚ್.ಜಿ.ಪಿಯು ಕಾಲೇಜಿಗೆ ಡೊನೇಷನ್ ವಸೂಲಿ ಆರೋಪಕ್ಕಾಗಿ ನೋಟಿಸ್ ಜಾರಿ ಮಾಡಿದ್ದರು.  ಆ ಪ್ರಕರಣದ ಬೆನ್ನಲೇ ಮತ್ತೊಂದು ಕಾಲೇಜಿನ ಡೊನೇಷನ್ ವಸೂಲಿ ದಂಧೆ ಬೆಳಕಿಗೆ ಬಂದಿದೆ. 

ಪ್ರಭು ಸಾರಂಗದೇವ ಶಿವಾಚಾರ್ಯರಿಗೆ ಸೇರಿದ ಶಿಕ್ಷಣ ಸಂಸ್ಥೆ ಇದಾಗಿದ್ದು ಅವರೇ ಈ ಸಂಸ್ಥೆಯ  ಚೇರ್’ಮನ್.  ವಿಜ್ಞಾನ ವಿಭಾಗದ ಅಡ್ಮಿಷನ್’ಗಾಗಿ‌ 15-20 ಸಾವಿರ ಡೊನೇಷನ್ ಡಿಮ್ಯಾಂಡ್ ಮಾಡಲಾಗುತ್ತಿದ್ದು,  ಇನ್ನಿತರ ವಿಭಾಗದ ಅಡ್ಮಿಷನ್’ಗೆ 10-15 ಸಾವಿರ ಡಿಮಾಂಡ್ ಮಾಡುತ್ತಾರೆ.  ಆದರೆ ವಿದ್ಯಾರ್ಥಿಗಳಿಗೆ 2982 ರೂ ರಶೀದಿ ಮಾತ್ರ ನೀಡುತ್ತಾರೆ. 

ಹಣ ಸ್ವೀಕರಿಸುವ ವಿಡಿಯೋ ಬೇಕಾದ್ರೂ ಮಾಡಿಕೊಳ್ಳಿ ಎಂದು ಸಿಬ್ಬಂದಿಗಳು ಮೊಂಡತನ ಪ್ರದರ್ಶನ ಮಾಡುತ್ತಾರೆ.  ನಿವೃತ್ತ ಸಿಬ್ಬಂದಿಗಳ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳವುದಿಲ್ಲವೆಂದು ಅವರನ್ನು ಬಳಸಿಕೊಂಡು ಹಣ ವಸೂಲಿ ಮಾಡುತ್ತಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

loader