ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇಂಡಿಯಾನಾಪೊಲೀಸ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು
ವಾಷಿಂಗ್ಟನ್(ಡಿ.3): ಅಮೆರಿಕದ ಯಾವುದೇ ಕಂಪನಿಗಳು ವಿದೇಶಗಳಿಗೆ ಸ್ಥಳಾಂತರವಾಗುವಂತಿಲ್ಲ. ಹಾಗೇನಾದರೂ ಯಾರಾದರೂ ದೇಶ ಬಿಟ್ಟು ಹೊರಹೋಗಲು ಯತ್ನಿಸಿದರೆ, ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇಂಡಿಯಾನಾಪೊಲೀಸ್ನಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಟ್ರಂಪ್, ‘‘ನಮ್ಮ ದೇಶದ ಕಂಪನಿಗಳು ರಾಜ್ಯದಿಂದ ರಾಜ್ಯಕ್ಕೆ ಸ್ಥಳಾಂತರಗೊಳ್ಳಬಹುದು. ಆದರೆ, ದೇಶ ಬಿಟ್ಟು ಹೋಗುವ ಹಾಗಿಲ್ಲ. ಹೋದರೆ ಸುಮ್ಮನೆ ಬಿಡುವುದಿಲ್ಲ,’’ ಎಂದಿದ್ದಾರೆ.
