ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಅವರಿಗೆ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಬೇಕು ಎಂದು ಭಾರತ ಆಮಂತ್ರಣವನ್ನು ನೀಡಿದೆ. ಆದರೆ, ಟ್ರಂಪ್ ಭಾರತಕ್ಕೆ ಬರುತ್ತಾರಾ ಇಲ್ವಾ? ಇಲ್ಲಿದೆ ವಿವರ.

ನವದೆಹಲಿ, [ಅ.28]: ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರಬೇಕು ಎಂದು ಭಾರತ ನೀಡಿದ ಆಮಂತ್ರಣವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. 

ಆಗಸ್ಟ್​ನ ಆರಂಭದಲ್ಲಿ, ಟ್ರಂಪ್​​​​ಗೆ ಭಾರತಕ್ಕೆ ಬರಲು ಆಮಂತ್ರಣ ನೀಡಿರುವುದನ್ನ ವೈಟ್​ ಹೌಸ್​​​ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್​​ ದೃಢಪಡಿಸಿದ್ದರು. ಆದರೆ, ಇದಿಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2019ರ ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಸುದ್ದಿ ಬಂದಿದೆ.

ಏನು ಕಾರಣ: ಜನವರಿ 26ರ ಸುಮಾರಿಗೆ ಸ್ಟೇಟ್ ಆಫ್ ದಿ ಯುನಿಯನ್ ಅಡ್ರೆಸ್ (ರಾಷ್ಟ್ರದ ಹೆಸರಿನಲ್ಲಿ ಭಾಷಣ) ಕಾರ್ಯಕ್ರಮವಿದೆ. ರಷ್ಯಾದ ಜತೆ ಒಪ್ಪಂದ, ಮಧ್ಯಪ್ರಾಚ್ಯದ ತೈಲ ಗೊಂದಲ ಇನ್ನು ಮುಗಿದಿಲ್ಲ. ಹೀಗಾಗಿ, ಭಾರತ ಸರ್ಕಾರದ ಆಹ್ವಾನವನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಟ್ರಂಪ್ ಸರ್ಕಾರ ಹೇಳಿದೆ.