ಮೆರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಇನ್ನು ಮುಂದೆ ವೇತನ ಹಾಗೂ ರಜೆಯನ್ನು ತೆಗೆದುಕೊಳ್ಳುವುದಿಲ್ಲವಂತೆ! ಹಾಗಂತ ಅವರೇ ಖುದ್ದಾಗಿ ಘೋಷಿಸಿದ್ದಾರೆ.

ವಾಷಿಂಗ್ ಟನ್ (ನ.14): ಅಮೆರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಇನ್ನು ಮುಂದೆ ವೇತನ ಹಾಗೂ ರಜೆಯನ್ನು ತೆಗೆದುಕೊಳ್ಳುವುದಿಲ್ಲವಂತೆ! ಹಾಗಂತ ಅವರೇ ಖುದ್ದಾಗಿ ಘೋಷಿಸಿದ್ದಾರೆ.

ಪ್ರತಿ ವರ್ಷ ವೇತನವಾಗಿ 1 ಡಾಲರನ್ನು ತೆಗೆದುಕೊಳ್ಳುತ್ತೇನೆ. ಅಮೆರಿಕಾ ಅಧ್ಯಕ್ಷರಿಗಿರುವ ವೇತನ 400,000 ನ್ನು ತೆಗೆದುಕೊಳ್ಳುವುದಿಲ್ಲ. ಜೊತೆಗೆ ರಜೆಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ನಾವು ಸಾಕಷ್ಟು ಜನೋಪಯೋಗಿ ಕೆಲಸಗಳನ್ನು ಮಾಡಿದ್ದೇವೆ. ಇನ್ನು ಬೇಕಾದಷ್ಟು ಕೆಲಸಗಳು ಮಾಡುವುದು ಬಾಕಿಯಿದೆ. ನಾನು ಇದನ್ನೆಲ್ಲಾ ಜನರಿಗೋಸ್ಕರ ಮಾಡಲು ಇಚ್ಚಿಸುತ್ತೇನೆ ಎಂದಿದ್ದಾರೆ.