‘‘ನಮಗೆ ಡ್ರೋಣ್ ಬೇಕಾಗಿಲ್ಲ, ನೀವೇ ಇಟ್ಟುಕೊಳ್ಳಿ ಎಂಬುದಾಗಿ ಚೀನಾಕ್ಕೆ ನಾವು ಹೇಳಬೇಕು,’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ವಾಷಿಂಗ್ಟನ್(ಡಿ.18): ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ವಶಪಡಿಸಿಕೊಂಡಿದ್ದ ನೌಕಾ ದಳದ ಮಾನವ ರಹಿತ ಜಲಾಂತರ್ಗಾಮಿ ಡ್ರೋಣ್ ಅನ್ನು ಆ ದೇಶವೇ ಇಟ್ಟುಕೊಳ್ಳಲಿ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘‘ನಮಗೆ ಡ್ರೋಣ್ ಬೇಕಾಗಿಲ್ಲ, ನೀವೇ ಇಟ್ಟುಕೊಳ್ಳಿ ಎಂಬುದಾಗಿ ಚೀನಾಕ್ಕೆ ನಾವು ಹೇಳಬೇಕು,’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಕಳೆದ ಗುರುವಾರ ವಶಪಡಿಸಿಕೊಳ್ಳಲಾಗಿದ್ದ ಜಲಾಂತರ್ಗಾಮಿಯನ್ನು ಹಿಂದಿರುಗಿಸುವುದಕ್ಕೆ ಚೀನಾದೊಂದಿಗೆ ಸಹಮತಕ್ಕೆ ಬರಲಾಗಿದೆ ಎಂದು ಅಮೆರಿಕ ಘೋಷಿಸಿದ ಬೆನ್ನಲ್ಲೇ ಟ್ರಂಪ್ ಈ ರೀತಿ ಟ್ವೀಟ್ ಮಾಡಿದ್ದಾರೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಡಿ. 15ರಂದು ಚೀನಾ ಅಕ್ರಮವಾಗಿ ಡ್ರೋನ್ ವಶಪಡಿಸಿಕೊಂಡಿದೆ ಎಂದು ಅಮೆರಿಕ ಸೇನೆ ಆಪಾದಿಸಿತ್ತು. ಈ ಸಂಬಂಧ ಅಮೆರಿಕ ಅಧಿಕೃತ ರಾಜತಾಂತ್ರಿಕ ದೂರು ದಾಖಲಿಸಿ ಡ್ರೋನ್ ಹಿಂದಕ್ಕೆ ಒಪ್ಪಿಸುವಂತೆ ಮನವಿ ಮಾಡಿತ್ತು. ಡ್ರೋನ್ ವಿಷಯದಲ್ಲಿ ಅಮೆರಿಕ ಗದ್ದಲ ಸೃಷ್ಟಿಸುತ್ತಿರುವುದಕ್ಕೆ ಚೀನಾ ಟೀಕಿಸಿತ್ತು.