ಅಮೆರಿಕದಲ್ಲಿ ವಲಸಿಗರಿಗೆ ಜಾಗವಿಲ್ಲ ಎಂದ ಟ್ರಂಪ್| ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಾಣ ಕಾರ್ಯ ಪರಿಶೀಲನೆ| ವಲಸೆ ಅಧಿಕಾರಿಗಳು ಮತ್ತು ಗಡಿ ಭದ್ರತಾ ಪಡೆಯೊಂದಿಗೆ ಸಮಾಲೋಚನೆ| ಅಮೆರಿಕ ವಲಸಿಗರಿಂದ ಭರ್ತಿಯಾಗಿದೆ ಎಂದ ಅಧ್ಯಕ್ಷ|
ವಾಷಿಂಗ್ಟನ್(ಏ.07): ಅಮೆರಿಕ ವಲಸಿಗರಿಂದ ತುಂಬಿ ತುಳುಕುತ್ತಿದ್ದು, ವಲಸಿಗರಿಗೆ ಇಲ್ಲಿ ಜಾಗವಿಲ್ಲ ಎಂದು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಮೆಕ್ಸಿಕೊ ಗಡಿ ಭಾಗದಲ್ಲಿ ನಿರ್ಮಿಸಲಾದ ಹೊಸ ಗೋಡೆಯ ತಪಾಸಣೆಗಾಗಿ ದಕ್ಷಿಣ ಕ್ಯಾಲಿಫೋರ್ನಿಯಾದ ಕ್ಯಾಲೆಕ್ಸಿಕೊಕ್ಕೆ ಡೊನಾಲ್ಡ್ ಟ್ರಂಪ್ ಭೇಟಿ ನೀಡಿದ್ದರು.
ಈ ವೇಳೆ ವಲಸೆ ಇಲಾಖೆಯ ಅಧಿಕಾರಿಗಳು ಮತ್ತು ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಟ್ರಂಪ್, ಗಡಿ ಭದ್ರತಾ ಪಡೆಯ ಡೊತೆ ದುಂಡು ಮೇಜಿನ ಸಭೆ ನಡೆಸಿದರು.
ಅಮೆರಿಕ ವಲಸಿಗರಿಂದ ಭರ್ತಿಯಾಗಿದ್ದು, ದೇಶದಲ್ಲಿ ಹೊಸ ವಲಸಿಗರ ಪ್ರವೇಶ ಮತ್ತು ಆಶ್ರಯಕ್ಕೆ ಜಾಗವಿಲ್ಲ ಎಂದು ಟ್ರಂಪ್ ಈ ವೇಳೆ ಸ್ಪಷ್ಟಪಡಿಸಿದರು.
