ಪ್ರಧಾನಿ ನವಾಜ್ ಷರೀಫ್ ಕಣ್ಣಿಗೆ ಗೋಚರಿಸುವ ಉತ್ತಮವಾದ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನಕ್ಕೆ ಯಾವುದೇ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸಲು ಹಿಂಜರಿಯಬಾರದು. ನಾನು ಅಧಿಕಾರ ಸ್ವೀಕಾರ ಮಾಡುವ ಮೊದಲೇ ಕರೆದರೂ ತೊಂದರೆಯಿಲ್ಲ ಎಂದು ನವಾಜ್ ಷರೀಫ್'ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ

ಇಸ್ಲಾಮಾಬಾದ್(ಡಿ.1):‘ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಓರ್ವ ಅಸಾಧಾರಣ ವ್ಯಕ್ತಿ. ಪಾಕಿಸ್ತಾನದವರು ತುಂಬಾ ಬುದ್ಧಿವಂತರು ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಂಡಾಡಿದ್ದಾರೆ,’’ ಎಂದು ಪಾಕಿಸ್ತಾನ ಸರ್ಕಾರ ಹೇಳಿಕೊಂಡಿದೆ. ಪ್ರಧಾನಿ ನವಾಜ್ ಷರೀಫ್ ಕಣ್ಣಿಗೆ ಗೋಚರಿಸುವ ಉತ್ತಮವಾದ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನಕ್ಕೆ ಯಾವುದೇ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸಲು ಹಿಂಜರಿಯಬಾರದು. ನಾನು ಅಧಿಕಾರ ಸ್ವೀಕಾರ ಮಾಡುವ ಮೊದಲೇ ಕರೆದರೂ ತೊಂದರೆಯಿಲ್ಲ ಎಂದು ನವಾಜ್ ಷರೀಫ್'ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ಪಾಕಿಸ್ತಾನದ ಸರ್ಕಾರದ ಅಧಿಕೃತ ಹೇಳಿಕೆಗಳು ತಿಳಿಸಿವೆ.

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಜತೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿರುವ ಮತ್ತು ಡೊನಾಲ್ಡ್ ಟ್ರಂಪ್, ‘‘ಪ್ರಸ್ತುತದ ಸಮಸ್ಯೆಗಳ ನಿವಾರಣೆಗಾಗಿ ಪಾಕಿಸ್ತಾನಿ ನಾಯಕರು ಇಚ್ಛಿಸುವ ಯಾವುದೇ ಪಾತ್ರ ನಿರ್ವಹಣೆಗೆ ಅಮೆರಿಕ ಸಿದ್ಧವಿದೆ,’’ ಎಂದು ಪಾಕಿಸ್ತಾನ ಸರ್ಕಾರ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್‌ಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಸಾಧಿಸಿದ ಡೊನಾಲ್ಡ್ ಟ್ರಂಪ್‌ಗೆ ಅಭಿನಂದನೆ ಸಲ್ಲಿಸಲು ನವಾಜ್ ಷರೀಫ್ ಕರೆ ಮಾಡಿದ್ದರು.