'ಟ್ರಂಪ್ ಶ್ವೇತಭವನದೊಳಗೆ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಈಗಾಗಲೇ ಉಗ್ರರು ಶ್ವೇತಭವನದ ಮೇಲೆ ಕಣ್ಣಿಟ್ಟಿದ್ದಾರೆ. ಒಮ್ಮೆಗೆ 40 ಉಗ್ರರು ದಾಳಿ ಮಾಡಿದರೆ ಏನು ಮಾಡಲು ಸಾಧ್ಯ?- ಡಾನ್ ಬೊಂಗಿನೋ

ನವದೆಹಲಿ(ಮಾ.19): 'ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್'ಗೆ ಶ್ವೇತಭವನ ಸುರಕ್ಷಿತವಲ್ಲ' ಎಂದು ಗುಪ್ತಚರ ಇಲಾಖೆಯ ಮಾಜಿ ಸಿಬ್ಬಂದಿ ಡಾನ್ ಬೊಂಗಿನೋ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಶಂಕಿತ ವ್ಯಕ್ತಿಯೊಬ್ಬ ಬಿಗಿ ಭದ್ರತೆ ನಡುವೆಯೂ ಶ್ವೇತಭವನದ ಕ್ಯಾಂಪಸ್ ಒಳಗೆ ಜಿಗಿದು ಕೆಲಹೊತ್ತು ಆತಂಕ ಸೃಷ್ಟಿಸಿದ್ದು ಮಾತ್ರವಲ್ಲದೇ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ಆ ವೇಳೆ ಶ್ವೇತಭವನದ ರಕ್ಷಣಾಪಡೆಗಳು ಆತನನ್ನು ವಶಕ್ಕೆ ಪಡೆದಿದ್ದರು.

ಆ ಘಟನೆ ನಡೆದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದ್ದು ಸಾಕಷ್ಟು ಮಹತ್ವ ಪಡೆದಿದೆ. ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಬೊಂಗಿನೋ, 'ಟ್ರಂಪ್ ಶ್ವೇತಭವನದೊಳಗೆ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಈಗಾಗಲೇ ಉಗ್ರರು ಶ್ವೇತಭವನದ ಮೇಲೆ ಕಣ್ಣಿಟ್ಟಿದ್ದಾರೆ. ಒಮ್ಮೆಗೆ 40 ಉಗ್ರರು ದಾಳಿ ಮಾಡಿದರೆ ಏನು ಮಾಡಲು ಸಾಧ್ಯ? ಎಂದಿದ್ದಾರೆ.

ಒಬಾಮ ಅಧ್ಯಕ್ಷರಾಗಿದ್ದಾಗಲೂ ಶ್ವೇತಭವನದಲ್ಲಿ ಸಾಕಷ್ಟು ಬಾರಿ ಭದ್ರತೆ ಉಲ್ಲಂಘನೆಗೆ ಸಾಕ್ಷಿಯಾಗಿತ್ತು.