ಮಾಜಿ ರಾಯಭಾರಿ ರಿಚರ್ಡ್ ವರ್ಮಾರ ನಿವೃತ್ತಿಯ ಬಳಿಕ ಜ.20ರಿಂದ ಈ ಸ್ಥಾನ ಖಾಲಿಯಿತ್ತು.
ವಾಷಿಂಗ್ಟನ್(ಸೆ.06): ಐತಿಹಾಸಿಕ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಪ್ರಮುಖ ರೂವಾರಿಗಳಲ್ಲಿ ಒಬ್ಬರಾದ ಮತ್ತು ಹಿರಿಯ ಆರ್ಥಿಕ ಸಲಹೆಗಾರರಾದ ಕೆನ್ನೆತ್ ಜಸ್ಟರ್ ಅವರನ್ನು ಭಾರತದಲ್ಲಿನ ಅಮೆರಿಕದ ಮುಂದಿನ ರಾಯಭಾರಿಯಾಗಿ ನೇಮಿಸಲಾಗಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಆದೇಶ ಹೊರಡಿಸಿದ್ದಾರೆ.
ಜಸ್ಟರ್ ನೇಮಕಾತಿ ಪ್ರಸ್ತಾಪವನ್ನು ಟ್ರಂಪ್ ಅಮೆರಿಕ ಸಂಸತ್ತಿಗೆ ಹಸ್ತಾಂತರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ದೃಢೀಕರಣ ನಡೆಯಲಿದೆ. ಮಾಜಿ ರಾಯಭಾರಿ ರಿಚರ್ಡ್ ವರ್ಮಾರ ನಿವೃತ್ತಿಯ ಬಳಿಕ ಜ.20ರಿಂದ ಈ ಸ್ಥಾನ ಖಾಲಿಯಿತ್ತು.
ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿದ ತಮ್ಮ ಸರ್ಕಾರದ ನೀತಿಯನ್ನು ಪ್ರಕಟಿಸಿದ ಬೆನ್ನಲ್ಲೇ ಟ್ರಂಪ್ ಜಸ್ಟರ್ ನೇಮಕಾತಿಯನ್ನು ಘೋಷಿಸಿದ್ದಾರೆ.
