ಚೀನಾ ಮೇಲೀಗ ಅಮೆರಿಕ ಕೆಂಗಣ್ಣು ಬೀರುತ್ತಿದೆ. ಅದಕ್ಕೆ ಕಾರಣ, ಮತ್ತೊಂದು ಬಾರಿ ಚೀನಾದ ಡಬಲ್ ಗೇಮ್. ಉ.ಕೊರಿಯಾಗೆ ಒಳಗೊಳಗೇ ಬೆಂಬಲ ಕೊಡುತ್ತಿರುವ ಚೀನಾ, ಯುದ್ಧದ ಕೋಲಾಹಲ ಸೃಷ್ಟಿಸುತ್ತಿದೆ. 3ನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯುತ್ತಾ ಡ್ರ್ಯಾಗನ್..? ಅಂಥಾದ್ದೊಂದು ಭೀತಿಗೆ ಕಾರಣವಾಗಿರೋದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಟ್ಟಿರುವ ಹೇಳಿಕೆ.
ಬೀಜಿಂಗ್(ಜು.31): ಚೀನಾ ಮೇಲೀಗ ಅಮೆರಿಕ ಕೆಂಗಣ್ಣು ಬೀರುತ್ತಿದೆ. ಅದಕ್ಕೆ ಕಾರಣ, ಮತ್ತೊಂದು ಬಾರಿ ಚೀನಾದ ಡಬಲ್ ಗೇಮ್. ಉ.ಕೊರಿಯಾಗೆ ಒಳಗೊಳಗೇ ಬೆಂಬಲ ಕೊಡುತ್ತಿರುವ ಚೀನಾ, ಯುದ್ಧದ ಕೋಲಾಹಲ ಸೃಷ್ಟಿಸುತ್ತಿದೆ. 3ನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯುತ್ತಾ ಡ್ರ್ಯಾಗನ್..? ಅಂಥಾದ್ದೊಂದು ಭೀತಿಗೆ ಕಾರಣವಾಗಿರೋದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಟ್ಟಿರುವ ಹೇಳಿಕೆ.
ಚೀನಾ ಡಬಲ್ ಗೇಮ್
ಚೀನಾದಿಂದ ತುಂಬಾನೇ ನಿರಾಸೆಯಾಗಿದೆ. ನಮ್ಮ ಹಳೆಯ ಮೂರ್ಖ ನಾಯಕರು ಅವರಿಗೆ ಬಿಲಿಯನ್ ಬಿಲಿಯನ್ ಡಾಲರ್ ವ್ಯವಹಾರ ಮಾಡಲು ಅವಕಾಶ ಮಾಡಿಕೊಟ್ಟರು. ಆದರೆ, ಅವರು ಉತ್ತರ ಕೊರಿಯಾ ವಿಚಾರದಲ್ಲಿ ನಮಗೆ ಸ್ವಲ್ಪವೂ ಸಹಕರಿಸುತ್ತಿಲ್ಲ. ಅವರು ಮನಸ್ಸು ಮಾಡಿದರೆ, ಸಮಸ್ಯೆಯನ್ನು ಬಹಳ ಸುಲಭವಾಗಿ ಬಗೆಹರಿಸಬಹುದು. ಆದರೆ, ಕೇವಲ ಮಾತನಾಡುತ್ತಿದ್ದಾರೆ. ಇದನ್ನು ಹೀಗೆಯೇ ಮುಂದುವರಿಯಲು ಬಿಡುವುದಿಲ್ಲ.
ಚೀನಾಗೆ ಇಂಥಾದ್ದೊಂದು ಎಚ್ಚರಿಕೆ ಕೊಟ್ಟಿರುವುದು ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಅದಕ್ಕೆ ಕಾರಣ ಉತ್ತರ ಕೊರಿಯಾ. ಚೀನಾಗೆ ನೇರವಾಗಿ ಇಂಥಾದ್ದೊಂದು ಬಹಿರಂಗ ಎಚ್ಚರಿಕೆ ಕೊಡುವ ಕೆಲಸವನ್ನು ಇದುವರೆಗೆ ಯಾವುದೇ ದೇಶ ಮಾಡಿರಲಿಲ್ಲ. ಅಂಥಾದ್ದೊಂದು ಧೈರ್ಯ ತೋರಿದೆ ಅಮೆರಿಕ.
ಚೀನಾ ಮೇಲೆ ಟ್ರಂಪ್ ಸಿಟ್ಟು!
ಚೀನಾದ ಮೇಡ್ ಇನ್ ಚೀನಾ ವಸ್ತುಗಳ ಆತಂಕ, ಕೇವಲ ಭಾರತವನ್ನು ಕಾಡುತ್ತಿಲ್ಲ. ಅದು ಅಮೆರಿಕಕ್ಕೂ ಅಪಾಯದ ಕರೆಗಂಟೆ ಹೊಡೆಯುತ್ತಿದೆ. ಹೀಗಾಗಿಯೇ ಅಧ್ಯಕ್ಷರಾದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೇಡ್ ಇನ್ ಅಮೆರಿಕ ಘೋಷಣೆ ಮೊಳಗಿಸಿದ್ದರು. ಅಷ್ಟೇ ಅಲ್ಲ, ಮೇಡ್ ಇನ್ ಅಮೆರಿಕ ವೀಕ್ ಎಂದು ಘೋಷಿಸಿ, ಜನಜಾಗೃತಿ ಮೂಡಿಸಿದ್ದರು. ಅದು ಚೀನಾ ವಿರುದ್ಧ ಅಮೆರಿಕ ಬಿಟ್ಟಿದ್ದ ಮೊತ್ತ ಮೊದಲ ಬ್ಯುಸಿನೆಸ್ ಬ್ರಹ್ಮಾಸ್ತ್ರ.
ಕಳೆದ ವರ್ಷ ಚೀನಾ, ಉತ್ತರ ಕೊರಿಯಾ ಜತೆ 309 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಮೊತ್ತದ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಬೇಸತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ವಿರುದ್ಧ ಕಿಡಿ ಕಾರುತ್ತಲೇ ಉತ್ತರ ಕೊರಿಯಾದ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ರವಾನಿಸಿದ್ದಾರೆ. ಅಷ್ಟೇ ಅಲ್ಲ ಉತ್ತರ ಕೊರಿಯಾ ವಿಚಾರದಲ್ಲಿ ಚೀನಾಗೆ ಎಚ್ಚರಿಕೆ ಕೊಡುತ್ತಿರುವ ಅಮೆರಿಕ, ಯುದ್ಧದ ಸೂಚನೆಯನ್ನೂ ನೀಡಿದೆ.
ಈ ನಡುವೆ ಅಮೇರಿಕಾಗೆ ತಿರುಗೇಟು ನೀಡಿರುವ ಚೀನಾ ಯಾವುದೇ ಶತ್ರು ದೇಶವನ್ನು ಎದುರಿಸಲು ನಾವು ಸರ್ವ ಸನ್ನದ್ಧ ಎಂದಿದೆ.
