ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ದೇಶದ ಧ್ವಜದ ಚಿತ್ರ ತಪ್ಪಾಗಿ ಬರೆದು ಟೀಕೆಗೆ ಗುರಿಯಾಗಿದ್ದಾರೆ. 

ಓಹಿಯೋದ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದ ಟ್ರಂಪ್, ಅಲ್ಲಿ ಮಕ್ಕಳೊಂದಿಗೆ ಧ್ವಜದ ಚಿತ್ರ ಬಿಡಿಸಲು  ಮುಂದಾಗಿ ಎಡ ವಟ್ಟು ಮಾಡಿಕೊಂಡಿದ್ದಾರೆ. 

ಅಮೆರಿಕ ಧ್ವಜದ ಮೇಲಿನ ಭಾಗದ ಎಡದಲ್ಲಿ ನೀಲಿ ಬಣ್ಣ ಮತ್ತು ನಕ್ಷತ್ರಗಳಿದ್ದು, ಅದರ ಪಕ್ಕ ಹಾಗೂ ಕೆಳಗೆ ಕೆಂಪು-ಬಿಳಿಯ 13 ಪಟ್ಟಿಗಳಿವೆ. ಆದರೆ, ಟ್ರಂಪ್ ಚಿತ್ರದಲ್ಲಿ ಕೆಂಪು-ಬಿಳಿ ನಡುವೆ ನೀಲಿ ಬಣ್ಣ ಚಿತ್ರಿಸಿದ್ದು, ಅದರ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.